ಕಿನ್ನಿಗೋಳಿಯಿಂದ ಕಟಿಲುವರೆಗೆ ಜಾಥಾ: ಸ್ವಚ್ಛತೆ ಕಡೆ ನಮ್ಮನಡೆ ಕಾಲ್ನಡಿಗೆ ಜಾಥಾ
ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತೆ ಕಡೆ ನಮ್ಮನಡೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕಳೆದ ಒಂದು ವರ್ಷದಿಂದ ಉತ್ತಮ ಕೆಲಸ ಮಾಡುತಿದೆ, ನಮ್ಮ ಪರಿಸರವನ್ನು ನಾವು ಸ್ವಚ್ಚವಾಗಿಡಬೇಕು ನಮ್ಮ ಜವಾಬ್ದಾರಿ ಎಂದರು.
ಕಿನ್ನಿಗೋಳಿ ವಸಂತ ಮಂಟಪದಿಂದ ಕಟೀಲು ದೇವಳದವರೆಗೆ ಜಾಥ ನಡೆದು ನಂತರ ಕಟೀಲು ದೇವಳದ ರಥಬೀದಿಯಲ್ಲಿ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ಅನಂತಪದ್ಮನಾಭ ಆಸ್ರಣ್ಣ ಮತ್ತು ಹರಿನಾರಾಯಣದಾಸ ಆಸ್ರಣ್ಣ ಭಾಗವಹಿಸಿದರು. ಸುಮಾರು 45 ಸಂಘ ಸಂಸ್ಥೆಗಳ 500 ಸದಸ್ಯರು ಈ ಜಾಥಾದಲ್ಲಿ ಭಾಗವಹಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಉಪಾಧ್ಯಕ್ಷೆ ಪದ್ಮಲತಾ ರಾವ್, ಮುಖ್ಯಾಧಿಕಾರಿ ಜಯಶಂಕರ ಪ್ರಸಾದ್, ಸಾಹಸ್ ಎನ್.ಜಿ.ಒ.ನ ಪೀಲ್ಡ್ ಸುಪರ್ ವೈಸರ್ ರವೀಂದ್ರ ಡಿ.ಎಸ್., ಉದ್ಯಮಿ ದನಂಜಯ ರೈ ಎಕ್ಕಾರು, ಟರ್ಕಿಯ ಇಸ್ತಾಂಬುಲ್ ನಲ್ಲಿ. ನಡೆದ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ನಲ್ಲಿ ಸ್ಪರ್ದೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಜಯಲಕ್ಷೀ ಆಚಾರ್ಯ ಮತ್ತು ಬೆಳ್ಳಿ ಪದಕ ಪಡೆದ ಸಾತ್ವಿ ಪಿ. ಸಾಲಿಯಾನ್ ಜಾಥಾದಲ್ಲಿ ಭಾಗವಹಿಸಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಿದ್ದೇವೆ, ಇದೀಗ ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಹಂತ ಹಂತವಾಗಿ ಸಂಪೂರ್ಣ ನಿಷೇಧ ಮಾಡುತ್ತಿದ್ದೇವೆ, ತ್ಯಾಜ್ಯ ವಿಂಗಡನೆಗಾಗಿ ಎಂ.ಆರ್.ಎಫ್. ಘಟಕ ಕಾರ್ಯಾರಂಭವಾಗುತಿದೆ. ಚುನಾಯಿತ ಆಡಳಿತ ಬರುದಕ್ಕೂ ಮೊದಲು ತ್ಯಾಜ್ಯ ಘಟಕದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡುವ ವ್ಯವಸ್ಥೆ ಆಗುತಿದ್ದೆ. -ಗುರುರಾಜ್ ಮಲ್ಲಿಗೆಯಂಗಡಿ, ಅಧ್ಯಕ್ಷರು, ಕಿನ್ನಿಗೋಳಿ ಪಟ್ಟಣ ಪಂಚಾಯತ್
ಸ್ವಚ್ಛತೆ ಎಂಬುವುದು ನಮ್ಮಂದಲೇ ಪ್ರಾರಂಭವಾಗಬೇಕು, ನಮ್ಮ ಸುತ್ತಮುತ್ತ ಸ್ವಚ್ಛಪಡಿಸುವ ಮೂಲಕ ಸ್ವಚ್ಛ ಭಾರತ ಕನಸ್ಸು ಸಾಕಾರಗೊಳ್ಳಲಿದೆ. ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕ್ಷೇತ್ರ ಕಟೀಲು.