ಜ.1ರಿಂದ ಹಲವು ರೈಲುಗಳ ಸಂಖ್ಯೆ ಪರಿಷ್ಕರಣೆ

ಜ.1ರಿಂದ ಹಲವು ರೈಲುಗಳ ಸಂಖ್ಯೆ ಪರಿಷ್ಕರಣೆ

ಮಂಗಳೂರು: 2027ರ ಜನವರಿ 1ರಿಂದ ಹೊಸ ಆದೇಶದ ಪ್ರಕಾರ ಮಲಬಾರ್, ಮಾವೇಲಿ, ಪರಶುರಾಮ್, ವಂದೇ ಭಾರತ್ ಸೇರಿ ಹಲವು ರೈಲುಗಳ ಸಂಖ್ಯೆಗಳು ಪರಿಷ್ಕರಣೆಯಾಗಲಿವೆ. ಹಾಗೆಯೇ, ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲುಗಳ ಸಂಖ್ಯೆಯೂ ಬದಲಾಗಲಿದೆ.

ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸಿದ ಬೆನ್ನಲ್ಲೇ ಮಂಗಳೂರು ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಖ್ಯೆಗಳನ್ನು ಪರಿಷ್ಕರಿಸಲಾಗಿದೆ. ಎಕ್ಸ್‌ಪ್ರೆಸ್, ವಂದೇ ಭಾರತ್ ಹಾಗೂ ಪ್ರಯಾಣಿಕ ರೈಲುಗಳು ಸೇರಿದಂತೆ ಒಟ್ಟು 30 ರೈಲು ಸೇವೆಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, 2027ರ ಜನವರಿ ೧ರಿಂದ ಹೊಸ ಸಂಖ್ಯೆಗಳು ಜಾರಿಗೆ ಬರಲಿವೆ.

ನೈಋತ್ಯ ರೈಲ್ವೆಯ ಅಧಿಸೂಚನೆ ಸಂಖ್ಯೆ 307/Chg/2026-27ರ ಪ್ರಕಾರ, ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಕೇರಳ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ಸಂಖ್ಯೆಗಳು ಬದಲಾಗಲಿವೆ. ವಂದೇ ಭಾರತ್ ರೈಲುಗಳಿಗೂ ಹೊಸ ಸಂಖ್ಯೆ: ಮಂಗಳೂರು ಸೆಂಟ್ರಲ್‌ನಿದ ಸಂಚರಿಸುವ ಎರಡು ಪ್ರಮುಖ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆಗಳನ್ನೂ ಪರಿಷ್ಕರಿಸಲಾಗಿದೆ.

ತಿರುವನಂತಪುರಂ-ಮಂಗಳೂರು ವಂದೇ ಭಾರತ್ ರೈಲು ಸಂಖ್ಯೆ 20631 ಇನ್ನುಮುಂದೆ 26659 ಆಗಲಿದ್ದು, ಮಂಗಳೂರು-ತಿರುವನಂತಪುರಂ ರೈಲು ಸಂಖ್ಯೆ 20632 ಅನ್ನು 26660ಕ್ಕೆ ಬದಲಾಯಿಸಲಾಗಿದೆ.

ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಸಂಖ್ಯೆ 20646 ಅನ್ನು 26657ಕ್ಕೆ ಹಾಗೂ ಮಡಗಾಂವ್-ಮಂಗಳೂರು ರೈಲು ಸಂಖ್ಯೆ 20645 ಅನ್ನು 26658ಕ್ಕೆ ಪರಿಷ್ಕರಿಸಲಾಗಿದೆ.

ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಕಲ್ಪಿಸುವ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ನಡುವಿನ ಆರು ಪ್ರಯಾಣಿಕ ರೈಲು ಸೇವೆಗಳ ಸಂಖ್ಯೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.

ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಚರಿಸುವ 56625, 56627 ಮತ್ತು 56629 ಸಂಖ್ಯೆಯ ರೈಲುಗಳು ಇನ್ಮುಂದೆ ಕ್ರಮವಾಗಿ 56225, 56227 ಹಾಗೂ 56233 ಸಂಖ್ಯೆಯಲ್ಲಿ ಸಂಚರಿಸಲಿವೆ.

ಅದೇ ರೀತಿ ಸುಬ್ರಹ್ಮಣ್ಯ ರಸ್ತೆಯಿಂದ ಮಂಗಳೂರಿಗೆ ಸಂಚರಿಸುವ 56626, 56628 ಮತ್ತು 56630 ಸಂಖ್ಯೆಯ ರೈಲುಗಳು ಕ್ರಮವಾಗಿ 56226, 56228 ಹಾಗೂ 56234 ಸಂಖ್ಯೆಯಲ್ಲಿ ಸಂಚಾರ ಮಾಡಲಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article