ಅ.18 ರಂದು ಕುವರಿ ಪೂಜೆ, ಸಾಮೂಹಿಕ ದುರ್ಗಾ ನಮಸ್ಕಾರ
Thursday, October 15, 2026
ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಅ.18 ರಂದು ಕೋಡಿಯಲ್ ಬೈಲ್ ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ನವರಾತ್ರಿಯ ಪ್ರಯುಕ್ತ ಆಧ್ಯಾತ್ಮಿಕ ನೆಲೆಯಲ್ಲಿ 8 ವರಗಷದ ಒಳಗಿನ ಹೆಣ್ಣು ಮಕ್ಕಳಿಗೆ ಕುವರಿ ಪೂಜೆ ಹಾಗೂ ಶಾರದಾ ವಿದ್ಯಾಲಯದ ಆವರಣದಲ್ಲಿ ಬೆಳಗ್ಗೆ 5 ಗಂಟೆಯಿಂದ 6.30 ರವರೆಗೆ ಸಾಮೂಹಿಕ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮೀ ಅಷ್ಟಕಂ ನಡೆಯಲಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ನ ಅಧ್ಯಕ್ಷ ರವೀಶ್ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ನವರಾತ್ರಿಯ ಬೇರೆ ಬೇರೆ ದಿನಗಳಲ್ಲಿ ಮಂಗಳೂರು ಹಾಗೂ ಸುತ್ತ ಮುತ್ತ ಇರುವ ಬಂಧುಗಳಿಗೆ ಅನುಕೂಲವಾಗುವಂತೆ ಶ್ರೀ ದೇವಿ ದೇವಸ್ಥಾನ, ಪೊಲೀಸ್ ಲೇನ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಗೋಡಿ, ಚಂಡಿಕಾ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಅಡ್ಯಾರ್ ಪದವು, ಶ್ರೀ ಭಗವತಿ ಕ್ಷೇತ್ರ ವಿಟ್ಲ, ಬಂಟ್ವಾಳ ತಾಲೂಕು, ಶ್ರೀ ಶಬರೀಶ ಶಾಖೆ, ನೆಲ್ಯಾಡಿ, ಇವರಿಂದ ತ್ರಿಗುಣಾತ್ಮಿಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಾವು ಕೌಕ್ರಾಡಿ ಗ್ರಾಮ, ಕೊಕ್ಕಡ, ಕಡಬ ತಾಲೂಕು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಶರವೂರು, ಕಡಬ ತಾಲೂಕು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆನಂದ ಕುಂಟಿನಿ, ಪ್ರಕಾಶ್ ನಾಯಕ್ ಕಂಕನಾಡಿ, ಉಮೇಶ್ ಆಚಾರ್ಯ ಕದ್ರಿ ಉಪಸ್ಥಿತರಿದ್ದರು.