ಎಸ್‌ಐಆರ್ ವಿರುದ್ಧ ‘ಜಂತರ್ ಮಂತರ್’ ಸತ್ಯಾಗ್ರಹ

ಎಸ್‌ಐಆರ್ ವಿರುದ್ಧ ‘ಜಂತರ್ ಮಂತರ್’ ಸತ್ಯಾಗ್ರಹ


ಮಂಗಳೂರು: ಎಸ್‌ಐಆರ್ ವಿರುದ್ಧ ದೇಶವ್ಯಾಪ್ತಿ ನಡೆಯುವ ‘ಪ್ರಜಾಪ್ರಭುತ್ವ ಮರಳಿ ಪಡೆಯೋಣ ಅರ್ಹ ಮತದಾರರ ಹಕ್ಕುಗಳನ್ನ ರಕ್ಷಿಸೋಣ’ ಎಂಬ ಹೋರಾಟದ ಭಾಗವಾಗಿ ದ.ಕ.ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಪ್ರಜಾಪ್ರಭುತ್ವ ಉಳಿಸಿ ಆಂದೋಲನ ದ.ಕ.ಜಿಲ್ಲೆ’ ಇದರ ನೇತೃತ್ವದಲ್ಲಿ ಶುಕ್ರವಾರ ನಗರದ ಕ್ಲಾಕ್‌ಟವರ್ ಬಳಿ ‘ಜಂತರ್ ಮಂತರ್’ ಹೆಸರಿನಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಂವಿಧಾನದ ರಕ್ಷಕರಾದ ಹೈಕೊರ್ಟ್, ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು, ಚುನಾವಣಾ ಆಯೋಗದ ಆಯುಕ್ತರು ಪ್ರಧಾನಿ, ಗೃಹಸಚಿವರಿಗೆ ತಲೆಭಾಗುವುದು ದುರಂತವಾಗಿದೆ. ಹಾಗಾಗಿ ನಾವು ಸಂವಿಧಾನದ ರಕ್ಷಕರಾಗುವ ಅನಿವಾರ್ಯ ತೆಯಿದ್ದು, ಎಸ್‌ಐಆರ್ ವಿರುದ್ಧದ ಹೋರಾಟ ಮುಂದುವರಿಸಬೇಕಿದೆ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜಾಪ್ರಭುತ್ವ ಉಳಿಸಿ ಆಂದೋಲನ-ದ.ಕ.ಜಿಲ್ಲೆ ಇದರ ಸಂಚಾಲಕ, ನ್ಯಾಯವಾದಿ ವಿನೋದ್ ಮಸ್ಕರೇಂಞಸ್ ಎಸ್‌ಐಆರ್ ವಿರುದ್ಧ ಪ್ರತಿಭಟನಾಕಾರರು ‘ಜಂತರ್ ಮಂತರ್’ಗೆ ಹೋಗದಂತೆ ತಡೆಯೊಡ್ಡಲಾಗುತ್ತದೆ. ಹಾಗಾಗಿ ಇದೀಗ ದೇಶಕ್ಕೆ ದೇಶವೇ ಜಂತರ್ ಮಂತರ್ ಆಗುತ್ತಿದೆ. ದೇಶದ 13 ಕೋಟಿಗೂ ಅಧಿಕ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. 

ಧರಣಿ ಸತ್ಯಾಗ್ರಹದಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಅಶ್ರಫ್ ಅಡ್ಡೂರು, ಅಥಾವುಲ್ಲಾ ಜೋಕಟ್ಟೆ, ಜಾಫರ್ ಸಾದಿಕ್ ಫೈಝಿ, ಶಾಹಿದಾ ತಸ್ನೀಂ, ಅನ್ಸಾರ್ ಬಜಾಲ್, ಮೋಹನ್ ಕೆ.ಇ., ಸಂತೋಷ್ ಡಿಸೋಜ, ಅಮೀನ್ ಅಹ್ಸನ್, ಆಯಿಶಾ ಯಾಸ್ಮೀನ್, ಝಾಹಿದ್ ಮಲಾರ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್.ಮತ್ತಿತರರು ಪಾಲ್ಗೊಂಡಿದ್ದರು. 

ಪ್ರಜಾಪ್ರಭುತ್ವ ಉಳಿಸಿ ಆಂದೋಲನ, ದ.ಕ. ಜಿಲ್ಲೆ ಇದರ ಸಹ ಸಂಚಾಲಕ ಅನ್ವರ್ ಸಾದತ್ ಬಜತ್ತೂರು ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article