ಎಸ್‌ಐಟಿ ಮುಖ್ಯಸ್ಥರ ಬದಲಾವಣೆಗೆ ಬುರುಡೆ ಗ್ಯಾಂಗ್ ಒತ್ತಡ!
ಮಂಗಳೂರು: ವಿಶೇಷ ಪ್ರಕರಣವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ದಳ (ಎಐಟಿ) ಮುಖ್ಯಸ್ಥರಾಗಿರುವ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರನ್ನು ಬದಲಿಸುವಂತೆ ಬುರುಡೆ ಗ್ಯಾಂಗ್ ಒತ್ತಾಯಿಸಿದೆ. ಈ ಮೂಲಕ ಬುರುಡೆ ಗ್ಯಾಂಗ್ ತನ್ನ ಪ್ರಬಾವ ಬಳಸಿ ತನಿಖಾ ವರದಿಯಲ್ಲಿ ತನ್ನ ಪ್ರಬಾವವನ್ನು ಬೀರಲು ಮಾಸ್ಟ್‌ರ್ ಪ್ಲಾನ್ ಹಾಕಲು ಸಿದ್ದತೆ ನಡೆಸಿದೆ ಎಂಬ ಅನುಮಾನ ಮೂಡಿದೆ.
ಈ ಹಿಂದೆ ದರ್ಂಸ್ಥಳ ಬುರುಡೆ ಪ್ರಕರಣದಲ್ಲಿ ಕೈಸುಟ್ಟಿಕೊಂಡಿರುವ ಈ ಗ್ಯಾಂಗ್ ಮಂಗಳೂರಿನಲ್ಲಿ ಶಶಿಕುಮಾರ್ ಅವರು ಹಿಂದೆ ಕರ್ತವ್ಯ ನಿರ್ವಹಿಸಿದ್ದನ್ನು ಕಾರಣವಾಗಿಟ್ಟುಕೊಂಡು, ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಕಷ್ಟವಾಗಬಹುದು ಎಂದು ಗ್ಯಾಂಗ್‌ನ ಸದಸ್ಯ ಸಂಘಟನೆ ವಾದಿಸಿದೆ.
ಸುಪ್ರೀಂ ಕೋರ್ಟ್ ಮೊರೆ:
ಶಶಿಕುಮಾರ್ ಅವರನ್ನು ಸಮರ್ಥ ಮತ್ತು ದಕ್ಷ ಅಧಿಕಾರಿ ಎಂದು ಪರಿಗಣಿಸಲಾಗಿದ್ದರೂ, ಅವರ ಬದಲಾವಣೆಗೆ ಬೇಡಿಕೆ ವ್ಯಕ್ತವಾಗಿರುವುದು ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ಬುರುಡೆ ಗ್ಯಾಂಗ್ ಈ ಕುರಿತು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದು, ಅದಕ್ಕೂ ಮುನ್ನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ಮನವಿಯ ನಂತರ, ಶಶಿಕುಮಾರ್ ಅವರ ಸ್ಥಾನಕ್ಕೆ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಿಸಲು ರಾಜ್ಯ ಸರ್ಕಾರಕ್ಕೆ ಮನವಿಯ ಜತೆಗೆ ಒತ್ತಡವನ್ನೂ ಹಾಕಿದೆ. ದಕ್ಷ ಅಧಿಕಾರಿಗಳನ್ನು ಒಂದೆಡೆ ಕೆಲಸ ಮಾಡಿದ್ದ ಕಾರಣಕ್ಕೆ ಬದಲಾಯಿಸುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ, ಆದರೆ ಗೃಹ ಸಚಿವರು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ ಬಹುತೇಕ ಖಚಿತ ಎಂಬ ಮಾಹಿತಿ ಲಭ್ಯ.