ಅ.ಭಾ.ಬ್ಯಾ.ಪ. ವತಿಯಿಂದ ಬ್ಯಾರಿ ಭಾಷೆ ದಿನಾಚರಣೆ
ಅವರು ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ನಗರದ ಖಾಸಗಿ ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷೆ ದಿನಾಚರಣೆ 2026 ಉದ್ಘಾಟಿಸಿ ಮಾತನಾಡಿದರು.
ಮಲಯಾಳಂ ಭಾಷೆ ನಮಗೆ ಸಾಕಾಗುವುದಿಲ್ಲವೇ ಎಂದು ಕೇಳಿದವರು ಇದ್ದಾರೆ. ಆದರೆ ಮಲಯಾಳಂ ಮಾತನಾಡುವವರಿಗೆ ನಮ್ಮ ಭಾಷೆ ಅರ್ಥ ಆಗುವುದಿಲ್ಲ. ತಮಿಳರಿಗೆ ಅರ್ಥ ಆಗುತ್ತದೆ. ನಾವು ಬ್ಯಾರಿ ಭವನವನ್ಞು 2027 ರಂದೇ ಕೇಳಿದ್ದೆವು. ಆ ಸಂದರ್ಭದಲ್ಲಿ ಸರ್ಕಾರದಿಂದ ನಮಗೆ ಸಿಕ್ಕಿದ್ದು ಬ್ಯಾರಿ ಅಧ್ಯಯನ ಪೀಠ. ಇದೀಗ ಬ್ಯಾರಿ ಭವನ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಬ್ಯಾರಿ ಭಾಷೆಗೆ ಯಾವುದೇ ಲಿಪಿ ಬೇಕಾದರೂ ಬಳಸಿ. ಬ್ಯಾರಿ ಭಾಷೆ ಉಳಿಸಿ ಅಭಿವೃದ್ಧಿ ಪಡಿಸುವ ಕಾರ್ಯದಿಂದ ಯಾರು ಹಿಂದೆ ಸರಿಯಬಾರದು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಮ್. ಶಹೀದ್, ಎಎಮ್ ಫೌಂಡೇಶನ್ ಚಯರ್ ಮ್ಯಾನ್ ಇನಾಯತ್ ಅಲಿ ಮೂಲ್ಕಿ ಮಾತನಾಡಿದರು.
ಅ.ಭಾ.ಬ್ಯಾ.ಪ. ಅಧ್ಯಕ್ಷ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರವ ಅಧ್ಯಕ್ಷ ಯು.ಎಚ್. ಖಾಲೀದ್ ಉಜಿರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾರಿ ಇನ್ಫೊ ಟೆಕ್ ಸ್ಥಾಪಕ ಮಹಮದ್ ಅಲಿ ಕಮರಡಿ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಯೂಸುಫ್ ವಕ್ತಾರ್‌ಗೆ ಜೀವಮಾನ ಶ್ರೇಷ್ಠ ಬ್ಯಾರಿ ಸಾಧಕ ಪ್ರಶಸ್ತಿ, ಡಾ. ಹಪ್ಸಾ ರಫೀಕ್‌ಗೆ ಶ್ರೇಷ್ಠ ಯುವ ಬ್ಯಾರಿ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ಯಾರಿ ಭಾಷೆ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯೆನೆಪೋಯ ಮೆಡಿಕಲ್ ಇನ್ಸ್ಟಿಟ್ಯೂಟ್ ಹೆಲ್ತ್ ಇನ್‌ಸ್ಪೆಕ್ಟರ್ ಆಯಿಶಾ ಪೆರ್ನೆ, ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಮ್.ಎಚ್. ಹಾಜಿ ಅಡ್ಡೂರು, ಅಲ್.ಭಾ.ಬ್ಯಾ.ಪ. ಗೌರವ ಅಧ್ಯಕ್ಷ ಜೆ. ಹುಸೈನ್, ಇನ್‌ಸ್ಪೆಕ್ಟರ್ ಸಲೀಮ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಇಬ್ರಾಹಿಂ ಬ್ಯಾರಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಎಮ್ ಶೌಕತ್ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು. ರಮ್ಲತ್ ಕಿರಾಅತ್ ಪಠಿಸಿದರು.