‘ಕಾಂಗ್ರೆಸ್‌ನ ಹಾರ್ಡ್‌ವೇರ್ ಜೆಹಾದಿ ಶಕ್ತಿ, ಸಾಫ್ಟ್‌ವೇರ್ ಅರ್ಬನ್ ನಕ್ಸಲ್’: ಸಿ.ಟಿ. ರವಿ ವಾಗ್ದಾಳಿ

‘ಕಾಂಗ್ರೆಸ್‌ನ ಹಾರ್ಡ್‌ವೇರ್ ಜೆಹಾದಿ ಶಕ್ತಿ, ಸಾಫ್ಟ್‌ವೇರ್ ಅರ್ಬನ್ ನಕ್ಸಲ್’: ಸಿ.ಟಿ. ರವಿ ವಾಗ್ದಾಳಿ

ಮಂಗಳೂರು: ಕಾಂಗ್ರೆಸ್ ಪಕ್ಷವು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದು, ಅದರ ಹಾರ್ಡ್‌ವೇರ್ ಜೆಹಾದಿ ಶಕ್ತಿಗಳು" ಮತ್ತು "ಸಾಫ್ಟ್‌ವೇರ್ ಅರ್ಬನ್ ನಕ್ಸಲ್’ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ದೇಶದಲ್ಲಿ 8 ಬಾರಿ ನಡೆದಿದೆ. ಇದೊಂದು ಸಂಪೂರ್ಣ ವಿಕೇಂದ್ರೀಕೃತ ಮತ್ತು ಸಾಂವಿಧಾನಿಕ ಪ್ರಕ್ರಿಯೆಯಾಗಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇವಲ ಅಧ್ಯಾದೇಶ ಹೊರಡಿಸುತ್ತಾರೆ. ಉಳಿದ ಮುಖ್ಯ ಪರಿಷ್ಕರಣೆ ಕಾರ್ಯವನ್ನು ದೇಶದ 11 ಲಕ್ಷಕ್ಕೂ ಹೆಚ್ಚು ಬಿಎಲ್‌ಒಗಳು. ಹೀಗಾಗಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ನೇರವಾಗಿ ಈ ಬಿಎಲ್‌ಒಗಳನ್ನು ಗುರಿಯಾಗಿಸುತ್ತದೆ ಎಂದಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಕೇರಳದ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ, ಕಾಂಗ್ರೆಸ್ನ ವಿ.ಡಿ. ಸತೀಸನ್ ಹಾಗೂ ತಮಿಳುನಾಡಿನ ಟಿವಿಕೆ ಪಕ್ಷದವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿರುವಾಗ ಕಾಂಗ್ರೆಸ್ ಮುಖಂಡರ ಆರೋಪದಲ್ಲಿ ಹುರುಳಿಲ್ಲ ಎಂದರು.

ಸುಳ್ಳು ಬೇಗ ಹರಡುತ್ತದೆ, ಸತ್ಯ ನಿಧಾನವಾಗಿಯಾದರೂ  ಪರಿಣಾಮಕಾರಿಯಾಗಿ ಜನರಿಗೆ ತಿಳಿಯುತ್ತದೆ. ಹಾಗಾಗಿ ಬಿಜೆಪಿಯಿಂದ ನವೆಂಬರ್ 1ರಿಂದ 30ರ ವರೆಗೆ ದೇಶಾದ್ಯಂತ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ, ಸಂವಿಧಾನ ರಕ್ಷಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆ, ರ್ಯಾಲಿಗಳು, ವಿದ್ಯಾರ್ಥಿಗಳೊಂದಿಗೆ ಸಂವಾದ, ಪ್ರಬುದ್ಧರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ, ಸಜ್ಜನ ಶಕ್ತಿಯ ಜಾಗೃತಿ ಇದರ ಗುರಿ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article