ಎಂಆರ್‌ಪಿಎಲ್‌ನ ದ್ವಿತೀಯ ಹಂತದ ಕಾರ್ಮಿಕರ ಆರೋಗ್ಯ ವಿಮಾ ಸೌಲಭ್ಯ ಬೇಡಿಕೆ ಈಡೇರುವ ಹಂತದಲ್ಲಿದೆ: ಸಂಸದ ಚೌಟ

ಎಂಆರ್‌ಪಿಎಲ್‌ನ ದ್ವಿತೀಯ ಹಂತದ ಕಾರ್ಮಿಕರ ಆರೋಗ್ಯ ವಿಮಾ ಸೌಲಭ್ಯ ಬೇಡಿಕೆ ಈಡೇರುವ ಹಂತದಲ್ಲಿದೆ: ಸಂಸದ ಚೌಟ

ಮಂಗಳೂರು: ಎಂಆರ್‌ಪಿಎಲ್‌ನ ದ್ವಿತೀಯ ಹಂತದ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವ ಬಹುಕಾಲದ ಬೇಡಿಕೆ ಈಡೇರುವ ಹಂತದಲ್ಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಆರ್‌ಪಿಎಲ್ ಗುತ್ತಿಗೆದಾರ ಕಾರ್ಮಿಕರು ಮತ್ತು ಅವರ ಕುಟುಂಬಿಕರಿಗೆ ಆರೋಗ್ಯ ವಿಮಾ ಬೇಡಿಕೆಯನ್ನು ಹಲವು ಸಮಯಗಳ ಹಿಂದೆಯೇ ಇಟ್ಟಿದ್ದು, ಈ ಬಗ್ಗೆ ಈಗಾಗಲೇ ಓಎನ್‌ಜಿಸಿ ಅಧಿಕಾರಿಗಳ ವಲಯದಲ್ಲಿ ಚರ್ಚೆಯಾಗಿದೆ. ಈ ಬೇಡಿಕೆ ತಿಂಗಳೊಳಗೆ ಘೋಷಣೆಯಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದರು.

ನನ್ನ ಮತ್ತು ಮೂಡುಬಿದಿರೆ ಶಾಸಕರಾದ ಉಮಾನಾಥ ಕೋಟ್ಯಾನ್ ಅವರ ಮುಂದೆ ಎಂಆರ್‌ಪಿಎಲ್ ಅಂಪ್ಲಾಯಿಸ್ ಯೂನಿಯನ್, ಕರ್ಮಾಚಾರಿ ಸಂಘ ಮತ್ತು ಭಾರತೀಯ ಮಜ್ದೂರ್ ಸಂಘ ಆರೋಗ್ಯ ವಿಮಾ ಕುರಿತಂತೆ ಬೇಡಿಕೆಯನ್ನಿರಿಸಿತ್ತು. ಇದೊಂದು ಆಡಳಿತಾತ್ಮಕ ಪ್ರಮುಖ ನಿರ್ಧಾರವಾಗಿದ್ದು, ಇದಕ್ಕೆ ಓಎನ್‌ಜಿಸಿ ಬೋರ್ಡ್‌ನಲ್ಲಿ ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಈ ಬಗ್ಗೆ ಓಎನ್‌ಜಿಸಿ ಅಧ್ಯಕ್ಷರಾದ ಅರುಣ್ ಕುಮಾರ್ ಸಿಂಗ್ ಅವರ ಬಳಿ ಮಾತನಾಡಿದ್ದು, ಮುಂದಿನ ಒಂದು ತಿಂಗಳೊಳಗೆ ಘೋಷಣೆ ಮಾಡುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದರು.

ಎಂಆರ್‌ಪಿಎಲ್ ದುರಂತದಲ್ಲಿ  ಇತ್ತೀಚೆಗೆ ಮೃತಪಟ್ಟ ಮನಿಷ್ ಕರ್ಕಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೆ, ಅವರ ಕುಟುಂಬಕ್ಕೆ ನೀಡಿದ್ದ ವಾಗ್ದಾನಕ್ಕೆ ಬದ್ಧವಾಗಿ ಅವರ ಪರವಾಗಿ ನಿಂತು ಎಂಆರ್‌ಪಿಎಲ್ ಆಡಳಿತ ಮಂಡಳಿಗೆ ಪೆಟ್ರೋಲಿಯಂ ಸಚಿವಾಲಯದಿಂದ ಸೂಕ್ತವಾದ ನಿರ್ದೇಶನ ನೀಡಿ 1.20 ಕೋಟಿ ರೂ. ಪರಿಹಾರ ನೀಡಲು ಶ್ರಮಿಸಿದ್ದೇವೆ. ಇದಕ್ಕೆ ಕೇಂದ್ರದ ಪೆಟ್ರೋಲಿಯಂ ಸಚಿವರಿಗೆ, ಕಾರ್ಯದರ್ಶಿಯವರಿಗೆ ಹಾಗೂ ಎಂಆರ್‌ಪಿಎಲ್ ಅಽಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ನ್ಯಾಯ ಸಮ್ಮತ ಬೇಡಿಕೆ:

ದುಡಿಯುವ ಕಾರ್ಮಿಕರ ಪರವಾಗಿ ನಿಂತು, ನ್ಯಾಯಸಮ್ಮತವಾದ ಬೇಡಿಕೆ ಈಡೇರಿಗೆ ನಿರಂತರ ಹೋರಾಟ ಮಾಡಿಕೊಂಡು ಬಂದು, ಅಂತಿಮ ಹಂತಕ್ಕೆ ತಲುಪುವಲ್ಲಿ ಶ್ರಮಿಸಿದ ಭಾರತೀಯ ಮಜ್ದೂರ್ ಸಂಘ, ಎಂಆರ್‌ಪಿಎಲ್ ಅಂಪ್ಲಾಯಿಸ್ ಯೂನಿಯನ್, ಕರ್ಮಾಚಾರಿ ಸಂಘಕ್ಕೆ ಕೃತಜ್ಞತೆಗಳು ಎಂದು ಬ್ರಿಜೇಶ್ ಚೌಟ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article