ದೇಶದ ಸಂಸ್ಕೃತಿಯ ಪರಂಪರೆಯೇ ಮಂಗಳೂರು: ಮಂಗಳೂರು ದಸರಾ ಅದ್ದೂರಿ ಚಾಲನೆ ನೀಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಧರ್ಮಸ್ಥಳ ಮಂಜುನಾಥ ಸ್ವಾಮಿ, ಕಟೀಲು ಶ್ರೀದೇವಿ, ಕುದ್ರೋಳಿಯಲ್ಲಿ ಗೋಕರ್ಣನಾಥ, ಕೊರಗಜ್ಜ ಎಲ್ಲರೂ ಇದ್ದು ಭಕ್ತರನ್ನು ಹರಸುತ್ತಿದ್ದಾರೆ. ಮೈಸೂರಿನ ದಸರಾ ರಾಜ ವೈಭವದ ಪ್ರತೀಕವಾದರೆ, ಮಂಗಳೂರು ದಸರಾ ಭಕ್ತಿ ವೈಭವದ ಪ್ರತೀಕ. ಕರಾವಳಿಯ ಭಕ್ತಿಗೆ ಗೌರವ, ಪರಂಪರೆಯ ಸಂರಕ್ಷಣೆಯ ಜತೆಗೆ ಕರಾವಳಿಗೆ ಹೊಸ ರೂಪ ಕೊಡಲು ಸರ್ಕಾರ ನಿರ್ದರಿಸಿದೆ. ಇದು ರಾಜಕೀಯ ಚಿಂತನೆ ಅಲ,್ಲ ಜನರ ಚಿಂತನೆ ಇದೆ. ನಮ್ಮ ಸರ್ಕಾರ ಕರಾವಳಿ ಅಭಿವೃದ್ಧಿ ಸಂಕಲ್ಪ ಮಾಡಿದೆ. ಹಿರಿಯರು ಕರಾವಳಿಗೆ ಮೆರಗು ಕೊಟ್ಟಿದ್ದಾರೆ. ಇಲ್ಲೇ ಮೂಲಭೂತವಾಗಿ ಪ್ರಕೃತಿ ಇದೆ. ಅದನ್ನು ಕಾಪಾಡುವುದು ನಮ್ಮ ಕರ್ತವ್ಯ. ಜನರ ಸಂಸ್ಕಾರ, ನ್ಯಾಯ, ಶಿಸ್ತಿಗೆ ಗೌರವ ಕೊಡಲು ನಾನು ಇಲ್ಲಿ ಮುಂದೆ ನಿಮ್ಮೆ ಜೊತೆ ಹೆಜ್ಜೆ ಹಾಕಲು ಇದ್ದೇನೆ ಎಂದರು.
ಸಭಾ ಕಾರ್ಯಕ್ರಮಕ್ಕೂಐ ಮುನ್ನ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಬಳಿಕ ಶ್ರೀ ಗೋಕರ್ಣನಾಥ ದೇವರಿಗೆ, ಕ್ಷೇತ್ರದ ಭವ್ಯ ದರ್ಬಾರ್ ಹಾಲ್‌ನಲ್ಲಿ ಶ್ರೀಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಗೆ ಮುಖ್ಯಮಂತ್ರಿಗಳು ಸಹಿತ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು.
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್‌ಪೂಜಾರಿ, ಟ್ರಸ್ಟಿಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಹರಿಕೃಷ್ಣ ಬಂಟ್ವಾಳ್, ಸಚಿವರಾದ ಯುಟಿ ಖಾದರ್, ಮಂಕಾಳ ವೈದ್ಯ, ರುಜುಮಾನ್ ಹರ್ಷಾದ್, ಸಂಸದ ಕ್ಯಾ.ಬೃಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ಐವನ್ ಡಿಸೋಜಾ, ರಮಾನಾಥ್ ರೈ, ಮಂಜುನಾಥ್ ಭಂಡಾರಿ, ವಿನಯಕುಮಾರ್ ಸೋರಕೆ ಸೇರಿದಂತೆ ಹಲವರಿದ್ದರು.
ತುಳು ಭಗವದ್ಗೀತೆ ಲೋಕಾರ್ಪಣೆ
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ ಅವರಿಗೆ ಧ್ವಜ ನೀಡಿ ದಸರಾಗೆ ಚಾಲನೆ ನೀಡಿದರು. ಇದೇ ಮೊದಲಬಾರಿಗೆ ಶ್ರೀಗುರುಗಳ ಧ್ವಜದ ಜತೆಗೆ ಸೂರ್ಯ ಚಂದ್ರರಿರುವ ತುಳು ಧ್ವಜವನ್ನೂ ನೀಡುವ ಪರಿಪಾಠಕ್ಕೆ ಚಾಲನೆ ನೀಡಲಾಯಿತು. ಜತೆಗೆ ತುಳುವಿಗೆ ಮಾನ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಕೆ ಇಸ್ಕಾನ್ ವಿರಚಿತ ತುಳು ಭಗವದ್ಗೀತೆ ಯನ್ನು ಸಿಎಂ ಲೋಕಾರ್ಪಣೆಗೊಳಿಸಿದರು.
25 ವಷದ ಬಳಿಕ ಪೂಜಾರಿ ಜತೆ ಡಿಕೆಶಿ
ಬಿ. ಜನಾರ್ದನ ಪೂಜಾರಿ ಅವರು ಕೇಂದ್ರದ ವಿತ್ತ ಸಚಿವರಾಗಿದ್ದ ಸಂದರ್ಭ ಕನಕಪುರದಲ್ಲಿ ಸಾಲಮೇಳ ಆಯೋಜಿಸಿ ಸುಮಾರು 7 ಸಾವಿರ ಜನರಿಗೆ ಆಗಿನ ಕಾಲದ 5 ಸಾವಿರ ರೂ ಸಾಲ ನೀಡಿರುವುದು ನನ್ನ ರಾಜಕೀಯ ಜೀವನದ ಮೋದಲ ಮುನ್ನುಡಿಯಾಗಿತ್ತು. 25 ವರ್ಷದ ಬಳಿಕ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿಗಳ ಜತೆ ಮತ್ತೆ ವೇದಿಕೆ ಹಂಚಿಕೊಂಡು ಹಿರಿಯರ ಆಶೀರ್ವಾದ ಪಡೆದ ಜತೆಗೆ ಕ್ಷೇತ್ರಾಧಿಪತಿಯ ಆಶೀರ್ವಾವೂ ಸಿಕ್ಕಿದ ಧನ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
