ಈದು ಅಶೋಕ್ ಕುಮಾರ್ ಜೈನ್ ಸಹಿತ, ಬೊಮ್ಮರಬೆಟ್ಟು ಯುವ ಬಾಂಧವೆರ್, ಕಕೇ೯ರಾ ಸಹೋದರರಿಗೆ 'ಕಂಬಳ ಅಕಾಡೆಮಿ ಪ್ರಶಸ್ತಿ'

ಈದು ಅಶೋಕ್ ಕುಮಾರ್ ಜೈನ್ ಸಹಿತ, ಬೊಮ್ಮರಬೆಟ್ಟು ಯುವ ಬಾಂಧವೆರ್, ಕಕೇ೯ರಾ ಸಹೋದರರಿಗೆ 'ಕಂಬಳ ಅಕಾಡೆಮಿ ಪ್ರಶಸ್ತಿ'


ಮೂಡುಬಿದಿರೆ: ದ.ಕ,ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ,ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಕೊಡಲ್ಪಡುವ 'ಕಂಬಳ ಅಕಾಡೆಮಿ ಪ್ರಶಸ್ತಿ-2026' ಗೆ  ಕಂಬಳದಲ್ಲಿ ಹ್ಯಾಟ್ರಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಹಿರಿಯ ಓಟಗಾರ ಹೊಸ್ಮಾರು ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ಸಹಿತ ಬೊಮ್ಮರಬೆಟ್ಟು ಯುವ ಬಾಂಧವೆರ್, ಕಕೇ೯ರಾ ಸಹೋದರರು  ಆಯ್ಕೆಯಾಗಿದ್ದಾರೆ.

ಅಕಾಡೆಮಿ ವತಿಯಿಂದ ನಡೆಯುತ್ತಿರುವ 7 ನೇ ವರ್ಷದ ಕಂಬಳ ತರಬೇತಿದಾರರಿಗೆ ಸಬ್ ಜೂನಿಯರ್ ವಿಭಾಗದ ಕೋಟಿ ಚೆನ್ನಯ ಜೋಡುಕರೆ ಪ್ರಾಯೋಗಿಕ ಕಂಬಳವು ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಅ.8 ಗುರುವಾರದಂದು ನಡೆಯಲಿದ್ದು ಇದೇ ಸಂದಭ೯ದಲ್ಲಿ ಬೆಳಿಗ್ಗೆ 11-30ಕ್ಕೆ  ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಚಿವರಾದ ಯು.ಟಿ.ಖಾದರ್,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ,ಸುನಿಲ್ ಕುಮಾರ್,ಬಿ.ರಮಾನಾಥ ರೈ,ಸಂಸದ ಬ್ರಿಜೇಶ್ ಚೌಟ,ಪುತ್ತೂರು ಶಾಸಕ ಅಶೋಕ್ ರೈ ಸಹಿತ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಸಂಚಾಲಕರಾದ ಕೆ.ಗುಣಪಾಲ ಕಡಂಬ ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article