ಆ.29 ರಂದು ಮೂಡುಬಿದಿರೆಯಿಂದ ನಾಪತ್ತೆಯಾಗಿದ್ದ ಯುವತಿ ಉತ್ತರಪ್ರದೇಶದಲ್ಲಿ ಪ್ರಿಯಕರನೊಂದಿಗೆ ಪತ್ತೆ
ದ್ವಿತಿಯ ಪಿಯುಸಿ ವರೆಗೆ ಓದಿರುವ ಅಚ್ಚರಕಟ್ಟೆಯ ರಮ್ಯಾನಿಗೆ ಮೊಬೈಲ್ ನಲ್ಲಿ ಫ್ರೀ ಫೈರ್ ಆಟ ಆಡುವ ಅಭ್ಯಾಸವಿದ್ದು ಆನ್ ಲೈನ್ ನಲ್ಲಿ ಆಡುವಾಗ ಉತ್ತರಪ್ರದೇಶ ಲಕ್ನೋದ ಅಮನ್ ವರ್ಮ ಎಂಬಾತನ ಪರಿಚಯವಾಗಿದೆ.
ಕಳೆದೊಂದು ವರ್ಷದ ಇವರಿಬ್ಬರ ನಡುವಿನ ಗೆಳೆತನ ಪ್ರೇಮಕ್ಕೆ ತಿರುಗಿದೆ.
ಕಳೆದ ಆಗಸ್ಟ್ 29 ರಂದು ರಮ್ಯಾ ಮನೆಯಿಂದ ನಾಪತ್ತೆಯಾಗಿದ್ದು ಈಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿರುತ್ತದೆ.
ನಾಪತ್ತೆಯಾಗಿದ್ದ ಆಕೆ ತನಗೆ ಪರಿಚಯವಾಗಿರುವ ಯುವಕನನ್ನು ಉತ್ತರಪ್ರದೇಶಕ್ಕೆ ಹುಡುಕಿಕೊಂಡು ಹೋಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಳು.
ಈ ಬಗ್ಗೆ ತನಿಖೆ ನಡೆಸಿದ ಮೂಡುಬಿದಿರೆ ಪೊಲೀಸರಿಗೆ ಆಕೆ ಲಕ್ನೋ ದ ಪ್ರಿಯಕರನ ಮನೆಯಲ್ಲಿರುವುದು ತಿಳಿದು ಬಂದಿದ್ದು ಹೋದ ಪೊಲೀಸರಲ್ಲಿ ರಮ್ಯಾ ‘ತಾನು ಪ್ರಾಯಪ್ರಬುದ್ಧಳಾಗಿದ್ದು ನನ್ನ ಸ್ವ ಇಚ್ಛೆಯಿಂದ ರೈಲಿನ ಮೂಲಕ ಲಕ್ನೋಗೆ ಬಂದಿದ್ದೇನೆ, ನಾನು ಮತ್ತು ಅಮನ್ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದು ನಾವಿಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ’ ಮನೆಗೆ ಬರುವುದಿಲ್ಲವೆಂದು ಹೇಳಿದ್ದಾಳೆಂದು ತಿಳಿದು ಬಂದಿದೆ.