ಬ್ಲಾಕ್ ಅಧ್ಯಕ್ಷರಿಗಾಗಿ ಪುತ್ತೂರಿಗೆ ಬಂತು ಕಾಂಗ್ರೆಸ್ ವಾಹನ
ರಾಜ್ಯದ ಎಲ್ಲಾ ಕಡೆಗಳಲ್ಲಿ ಸ್ವಂತ ನೆಲೆಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಹಾಗೂ ಬ್ಲಾಕ್ ಕಾಂಗ್ರೆಸ್ ವಾಹನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಲ್ಪನೆಯಾಗಿದೆ. ರಾಜ್ಯದ ಉಳಿದ ಭಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಹಂತಕ್ಕೆ ಬರುವ ಮೊದಲೇ ಪುತ್ತೂರು ಕಾಂಗ್ರೆಸ್ ಭವನ ಉದ್ಘಾಟನೆಯಾಗಲಿದೆ. ಭವನದ ಆರಂಭಕ್ಕೆ ಮೊದಲೇ ವಾಹನವನ್ನೂ ಒದಗಿಸಲಾಗಿದೆ. ಪಕ್ಷದ ಅಧ್ಯಕ್ಷರಿಗೆ ಕ್ಷೇತ್ರ ಪ್ರಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ವಾಹನ ಬಳಕೆಯಾಗಲಿದೆ. ಉಪ್ಪಿನಂಗಡಿ ಹಾಗೂ ವಿಟ್ಲದಲ್ಲಿಯೂ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ. ಸಧ್ಯ ಈ ಮೂರು ಬ್ಲಾಕ್‌ಗೂ ಒಂದೇ ವಾಹನ ಬಳಕೆಯಾಗಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾನು ಮಗು:
ನಾನು ಕಾಂಗ್ರೆಸ್ ಪಕ್ಷ ಸೇರಿ ಕೇವಲ ಮೂರುವರೆ ವರ್ಷ ಆಗಿದೆ. ಪಕ್ಷಕ್ಕೆ ಯಾವುದೇ ದೊಡ್ಡ ಕೊಡುಗೆ ನೀಡಿಲ್ಲ. ನಾನಿನ್ನೂ ಪಕ್ಷದಲ್ಲಿ ಚಿಕ್ಕ ಮಗು. ಕಾಂಗ್ರೆಸ್ ಭವನ, ವಾಹನ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಆಶೀರ್ವಾದದ ಫಲ. ಹಿರಿಯರ ಮಾರ್ಗದರ್ಶನದಂತೆ ಪಕ್ಷ ಮುನ್ನಡೆಯುತ್ತಿದೆ. ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಬಗ್ಗೆ ಪಕ್ಷದ ಕಾರ್ಯಕರ್ತರು ಜನತೆಗೆ ಅರಿವು ಮೂಡಿಸಬೇಕು. ದೇಶದಲ್ಲಿ ಬಡವರ್ಗಕ್ಕೆ ನೆಮ್ಮದಿಯ ಬದುಕು ಕೊಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಒಬ್ಬ ಶಾಸಕ ಪಕ್ಷದ ಎಲ್ಲಾ ಋಣವನ್ನು ತೀರಿಸುವ ಕೆಲಸವನ್ನು ಅಶೋಕ್ ರೈ ಅವರು ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಾಂಗ್ರೆಸ್ ಭವನ ಕೂಡಾ ನಿರ್ಮಾಣವಾಗುತ್ತಿದೆ. ಇದೀಗ ವಾಹನವೂ ಪಕ್ಷಕ್ಕಾಗಿ ಬಂದಿದೆ. ಪಕ್ಷದ ಸಂಘಟನೆಗಾಗಿ ಬಂದ ವಾಹನ ಪಕ್ಷದ ಬೆಳವಣಿಗೆಗೆ ಬಳಕೆಯಾಗಲಿ ಎಂದರು.
ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು ಪುಡಾ ಸದಸ್ಯರಾದ ನಿಹಾಲ್ ಪಿ. ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಉದ್ಯಮಿ ಸಿಯಾನ್ ದರ್ಬೆ, ವಿಕ್ರಂ ರೈ ಸಾಂತ್ಯ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.