ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳಾ ಫುಟ್ಬಾಲ್ ಪಂದ್ಯಾವಳಿ: ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ಫುಟ್ಬಾಲ್ ತಂಡಕ್ಕೆ ರನ್ನರ್‌ಅಪ್ ಸ್ಥಾನ

ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳಾ ಫುಟ್ಬಾಲ್ ಪಂದ್ಯಾವಳಿ: ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ಫುಟ್ಬಾಲ್ ತಂಡಕ್ಕೆ ರನ್ನರ್‌ಅಪ್ ಸ್ಥಾನ


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ಮಹಿಳಾ ಫುಟ್ಬಾಲ್ ತಂಡವು ಅ.16 ರಂದು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಡಿಪು ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ಫುಟ್ಬಾಲ್ ಪಂದ್ಯಾವಳಿ 2026-27ರಲ್ಲಿ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿದೆ.

ತಂಡದ ಸಾಧನೆಯನ್ನು ಅಭಿನಂದಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು, ಪಂದ್ಯಾವಳಿಯಲ್ಲಿ ಆಟಗಾರ್ತಿಯರು ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿ ನೀಡಿದ ಪ್ರಯತ್ನವನ್ನು ಶ್ಲಾಘಿಸಿದರು. ಮುಂದಿನ ಪಂದ್ಯಾವಳಿಗಳಲ್ಲಿಯೂ ಇದೇ ರೀತಿಯ ಪ್ರಯತ್ನ ಮುಂದುವರಿಸುವಂತೆ ಆಟಗಾರ್ತಿಯರನ್ನು ಪ್ರೋತ್ಸಾಹಿಸಿ, ತಂಡಕ್ಕೆ ಮಾರ್ಗದರ್ಶನ ಹಾಗೂ ಬೆಂಬಲ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕಿ ಹರ್ಷಿತಾ ಶೆಟ್ಟಿ ಅವರನ್ನೂ ಅಭಿನಂದಿಸಿದರು.

ಕಾಲೇಜಿನ ಆಡಳಿತ ಮಂಡಳಿ, ಬೋಧಕವರ್ಗ ಹಾಗೂ ವಿದ್ಯಾರ್ಥಿಗಳು ಮಹಿಳಾ ಫುಟ್ಬಾಲ್ ತಂಡದ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article