ಮೂಡುಬೆಳ್ಳೆಗೆ ಕೆಎಸ್‌ಆರ್‌ಟಿಸಿ ಬಸ್ ಪುನಾರಂಭಕ್ಕೆ ಆಗ್ರಹ

ಮೂಡುಬೆಳ್ಳೆಗೆ ಕೆಎಸ್‌ಆರ್‌ಟಿಸಿ ಬಸ್ ಪುನಾರಂಭಕ್ಕೆ ಆಗ್ರಹ

ಶಿರ್ವ: ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ವ್ಯಾಪ್ತಿಯ ಉಡುಪಿ-ಮೂಡುಬೆಳ್ಳೆಯ ಎರಡು ಕೆಎಸ್‌ಆರ್‌ಟಿಸಿ ನರ್ಮ್ ಬಸ್ ಸಂಚಾರವನ್ನು ಯಾವುದೇ ಮುನ್ಸೂಚನೆ ಅಥವಾ ಸಾರ್ವಜನಿಕ ಪ್ರಕಟನೆ ಇಲ್ಲದೆ ಸ್ಥಗಿತಗೊಳಿಸಿ ಕೆಲವು ತಿಂಗಳುಗಳೇ ಕಳೆದಿವೆ. 

ಹಿಂದೆ ಇದೇ ಬಸ್ ಸಂಚಾರ ಎರಡು ಬಾರಿ ಸ್ಥಗಿತಗೊಂಡಿದ್ದು ಕೋರ್ಟ್ ತಡೆಯಾಜ್ಞೆ ಕಾರಣ ನೀಡಲಾಗಿತ್ತು. ಆದರೆ ಈ ವರೆಗೆ ಈ ಬಸ್ಸು ಸಂಚಾರ ಮತ್ತೆ ಆರಂಭವಾಗಿರುವುದಿಲ್ಲ. ಈ ನಗರ ಮಿತಿಯ ಬಸ್ ಸಂಚಾರವನ್ನು ಕೂಡಲೇ ಪುನಾರಂಭ ಮಾಡಬೇಕು ಎಂದು ನಾಗರಿಕ ಸಮಿತಿ ಮೂಡುಬೆಳ್ಳೆ ಇದರ ಅಧ್ಯಕ್ಷ ಸುಧಾಕರ ಪೂಜಾರಿ ಆಗ್ರಹಿಸಿದ್ದಾರೆ.  

ಮರ್ಣೆಗೂ ಬಾರದ ಬಸ್ಸು..

ಉಡುಪಿ-ಮರ್ಣೆ ಕೆಎಸ್‌ಆರ್‌ಟಿಸಿ ನರ್ಮ್ ಬಸ್ ಸಂಪರ್ಕ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದು ಗ್ರಾಮೀಣ ಪ್ರದೇಶದ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ವೃದ್ಧರಿಗೆ ಸಮಸ್ಯೆ ಉಂಟಾಗಿರುತ್ತದೆ. ಈ ಬಗ್ಗೆ ಶಾಸಕರಿಗೆ,ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ  ಸಲ್ಲಿಸಲಾಗಿದೆ  ಎಂದವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article