ಅಸೌಖ್ಯದಿಂದ 2 ವರ್ಷದ ಮಗು ಮೃತ್ಯು
Thursday, October 29, 2026
ಸುಬ್ರಹ್ಮಣ್ಯ: ಅಸೌಖ್ಯದಿಂದ 2 ವರ್ಷದ ಮಗು ಆಸ್ಟಿನ್ (2) ಮೃತಪಟ್ಟಿದೆ.
ಅಸೌಖ್ಯದಿಂದ ಇದ್ದ ಮಗುವನ್ನು ಬುಧವಾರ ಪುತ್ತೂರು ಖಾಸಗಿ ಹಾಸ್ಪಿಟಲ್ಗೆ ಕೊಂಡೋಯ್ಯಲಾಗಿತು. ಅಲ್ಲಿ ಚಿಕಿತ್ಸೆ ನೀಡಿ ಚೇತರಿಕೆ ಕಂಡ ಬಳಿಕ ಮಗುವನ್ನು ಮರಳಿ ಮನೆಗೆ ಕರೆದುಕೊಂಡುಬರಲಾಗಿದೆ. ಗುರುವಾರ ಮುಂಜಾನೆ ಮಗು ಎಂದಿನಂತೆ ಎದ್ದು ಕೇಲಕಾಲ ಆಟವಾಡುತ್ತಿದ್ದ ಆಸ್ಟಿನ್ ಸ್ವಲ್ಪ ಹೊತ್ತಲ್ಲೇ ಕೊನೆಯುಸಿರೆಳೆದಿದ್ದಾನೆ.
ಮೃತ ಆಸ್ಟಿನ್ ಸುಬ್ರಹ್ಮಣ್ಯ ಕೋಳಿಫಾರಂ ಉದ್ಯಮಿ ಅನಿಲ್ ಮೊಂತೆರೊ ಹಾಗೂ ಸವಿತಾ ದಂಪತಿಗಳನ್ನು ಹಾಗೂ ಇಬ್ಬರು ಅಣ್ಣಂದಿರನ್ನು ಅಗಲಿದ್ದಾನೆ.