ಬಸವೇಶ್ವರ ದೇವಾಲಯದಲ್ಲಿ 2.5 ಸಾವಿರಕ್ಕೂ ಮಿಕ್ಕಿ ಭಕ್ತರಿಂದ ನವಾನ್ನ ಭೋಜನ ಸ್ವೀಕಾರ
Wednesday, October 14, 2026
ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ 2026 ನೇ ಸಾಲಿನ ಹೊಸರೋಗಣೆ (ನವಾನ್ನ) ಕಾರ್ಯಕ್ರಮದಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಮಿಕ್ಕಿ ಭಕ್ತ ಭಕ್ತರು ಹೊಸ ಅಕ್ಕಿ ಭೋಜನವನ್ನು ಉಂಡರು. 21 ಬಗೆಯ ವಿವಿಧ ಖಾದ್ಯಗಳನ್ನು ಒಳಗೊಂಡ ಭೋಜನದ ಸವಿಯನ್ನ ಭಕ್ತರು ಸವಿದರು.
ಭೋಜನಕ್ಕಾಗಿ ಈ ದೇವಳದ ಮುಂಭಾಗದಲ್ಲಿ ಹಿಂದಿನ ಸಂಪ್ರದಾಯದಂತೆ ಸಗಣಿ ಸಾಧಿಸಿದ ನೆಲದಲ್ಲಿ ಭಕ್ತರು ಕುಳಿತು ಊಟ ಮಾಡಿದರು. ಹಾಗೆಯೇ ನೂತನವಾಗಿ ನಿರ್ಮಿಸಲಾದ ಸಭಾಂಗಣದಲ್ಲಿ 1,500ಕ್ಕೂ ಅಧಿಕ ಭಕ್ತರು ಕೂತು ಟೇಬಲ್ ವ್ಯವಸ್ಥೆಯೊಂದಿಗೆ ಭೋಜನವನ್ನು ಸವಿದರು. ಶ್ರೀ ದೇವಳದಲ್ಲಿ ಬೆಳಿಗ್ಗೆ ಸ್ಥಳೀಯ, ಊರಿನ ಭಕ್ತರು ಬಂದು ತೆನೆಯನ್ನು ಸ್ವೀಕರಿಸಿ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು. ಮಧ್ಯಾಹ್ನದ ಮಹಾಪೂಜೆ ಆದ ನಂತರ ಭಕ್ತರು ತೀರ್ಥಪ್ರಸಾದ ಸ್ವೀಕರಿಸಿ ಭೋಜನ ಪ್ರಸಾದವನ್ನು ವ್ಯವಸ್ಥಿತವಾಗಿ ಏರ್ಪಡಿಸಲಾದ ಸ್ಥಳದಲ್ಲಿ ಕೂತು ಭೋಜನ ಸ್ವೀಕರಿಸಿದರು.
ಈ ಎಲ್ಲಾ ವ್ಯವಸ್ಥೆಗಳನ್ನು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಟ್ರಸ್ಟ್, ಭಜನಾ ಸಮಿತಿ, ವರಮಹಾಲಕ್ಷ್ಮಿ ಸಮಿತಿ, ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಮಂಗಳವಾರ ರಾತ್ರಿಯಿಂದಲೇ ಅನಹರ್ರಿಷಿಯಾಗಿ ದುಡಿದು ಸ್ವಯಂಸೇವಕರಾಗಿ ಸಲ್ಲಿಸಿದ ಸೇವೆ ಎಲ್ಲರಿಗೂ ಪ್ರಶಂಶಿನೀಯವಾಗಿತ್ತು.

