ಉಡುಪಿ ನಿತ್ಯಾನಂದ ಮಂದಿರಕ್ಕೆ ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಭೇಟಿ
Thursday, October 8, 2026
ಉಡುಪಿ: ಇಲ್ಲಿನ ಕೆ.ಎಮ್. ಮಾರ್ಗದಲ್ಲಿರುವ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ (ಮಠ)ಕ್ಕೆ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಿತ್ಯಾನಂದ ಮಂದಿರದ ವತಿಯಿಂದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿತ್ಯಾನಂದ ಮಂದಿರದ ಚೇರ್ಮನ್ ಕೊಡವೂರು ದಿವಾಕರ್ ಶೆಟ್ಟಿ, ಅಧ್ಯಕ್ಷರಾದ ಬನ್ನಂಜೆ ಉದಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಟಾಡಿ, ಕೋಶಾಧಿಕಾರಿ ಮಣಿಪುರ ಬಡಗುಮನೆ ಬಿಂದು ಶೆಟ್ಟಿ, ಮೇನೆಜರ್ ರವಿಪುತ್ರನ್ ಕೋಟೇಶ್ವರ, ನರೇಶ್ ಕುಮಾರ್ ಸುವರ್ಣ, ತಾರಾನಾಥ ಮೇಸ್ತ, ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ ಉಪಸ್ಥಿತರಿದ್ದರು.

