ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್: ಪ್ರಕರಣ ದಾಖಲು
ಉಳ್ಳಾಲ: ಕಣಚೂರು ಪದವಿ ಕಾಲೇಜಿನ ವಿದ್ಯಾರ್ಥಿ ಮತ್ತವರ ಸ್ನೇಹಿತರಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಕಣಚೂರುನಲ್ಲಿ ವಿದ್ಯಾಭ್ಯಾಸ ಮಾಡುವ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ ಅ.2 ರಂದು ದೂರುದಾರ ವಿದ್ಯಾರ್ಥಿಯ ಸ್ನೇಹಿತರು ಪ್ರಾರ್ಥನೆಗೆ ತೆರಳಿದ್ದರು ಈ ಸಂದರ್ಭ ಸದುಪಯೋಗ ಪಡಿಸಿಕೊಂಡ ಹಿರಿಯ ವಿದ್ಯಾರ್ಥಿಗಳು
ಖಾಸಗಿ ಹೋಟೆಲ್ ಬಳಿ ನಿಂತಿದ್ದ ದೂರು ದಾರ ವಿದ್ಯಾರ್ಥಿ ಬಳಿ ಅದೇ ಕಾಲೇಜಿನಲ್ಲಿ ಓದುತ್ತಿರುವ ಹಿರಿಯ ವಿದ್ಯಾರ್ಥಿಗಳಾದ ಅಶಬ್ ಹಾಗೂ ಅಸ್ಪಾಕ್ ಬಂದಿದ್ದರು. ಈ ಪೈಕಿ ಆರೋಪಿ ಅಸ್ಪಾಕ್ ಎಂಬಾತ ದೂರು ದಾರ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾನೆ.
ಆ.15 ರಂದು ಮಧ್ಯಾಹ್ನ 1 ಗಂಟೆಗೆ ದೂರುದಾರ ವಿದ್ಯಾರ್ಥಿಹಾಗೂ ಅವರ ಸ್ನೇಹಿತರು ಊಟಕ್ಕೆಂದು ಕಣಚೂರ ಕಾಲೇಜ್ ನ ಮುಂಭಾಗದಲ್ಲಿ ಇರುವ ಖಾಸಗಿ ಹೋಟೆಲ್ ಹೋಗಿದ್ದು, ಈ ವೇಳೆ ಆರೋಪಿ ಅಶಬ್ ಎಂಬಾತನು ತನ್ನ ಮೊಬೈಲ್ ನಿಂದ ದೂರು ದಾರ ವಿದ್ಯಾರ್ಥಿತ ಸ್ನೇಹಿತ ಝಾಹಿದ್ ನ ಮೊಬೈಲ್ ಗೆ ಪದೇ ಪದೇ ಕರೆ ಮಾಡಿ ದೂರು ದಾರ ವಿದ್ಯಾರ್ಥಿಹಾಗೂ ಅವರ ಸ್ನೇಹಿತರನ್ನು ಕಣಚೂರು ಕಾಲೇಜಿನ ಬಳಿಯಿರುವ ಕ್ಲೋಕ್ ಟವರ್ ಬಳಿಗೆ ಕರೆಸಿದ್ದ ಎನ್ನಲಾಗಿದೆ.
ಬಳಿಕ ಅವರೆಲ್ಲರನ್ನು ಹತ್ತಿರದಲ್ಲಿದ್ದ ಖಾಸಗಿ ಹೋಟೆಲ್ ನ ರೂಮ್ ಗೆ ಕರೆದುಕೊಂಡು ಹೋಗಿ, ಅಕ್ರಮವಾಗಿ ಕೂಡಿ ಹಾಕಿ, ದೂರುದಾರ ವಿದ್ಯಾರ್ಥಿಹಾಗೂ ಅವರ ಸ್ನೇಹಿತರಿಗೆ ಹಾಡು ಹಾಡುವಂತೆ ರ್ಯಾಗಿಂಗ್ ಮಾಡಿದ್ದು, ಹಾಡುಹಾಡದಿದ್ದರೆ ರೂಮ್ ನಿಂದ ಹೊರಗಡೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ದೂರು ದಾರ ವಿದ್ಯಾರ್ಥಿಯ ಸ್ನೇಹಿತರು ಭಯಗೊಂಡು ಹಾಡನ್ನು ಹಾಡಿದ್ದು, ಈ ಹಾಡನ್ನು ಆರೋಪಿ ಅಶಬ್ ನು ತನ್ನ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಿ ಬೇರೆಯವರಿಗೆ ಶೇರ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅ.22 ರಂದು ಮಧ್ಯಾಹ್ನ ವೇಳೆಗೆ ಆರೋಪಿ ಅಶಬ್ ಹಾಗೂ ಇನ್ನೊರ್ವನು ಬೈಕ್ ನಲ್ಲಿ ಬಂದು ದೂರು ದಾರ ವಿದ್ಯಾರ್ಥಿಯಸ್ನೇಹಿತ ಅಲ್ಪಾಝ್‌ನನ್ನು ಕರೆದುಕೊಂಡು ಹೋಗಿದ್ದು, ಈ ವಿಚಾರವನ್ನು ದೂರು ದಾರ ವಿದ್ಯಾರ್ಥಿ ಅಲ್ಪಾಝ್ ನಲ್ಲಿ ಕೇಳಿದ್ದರು. ಆರೋಪಿ ಅಶಬ್ ಹಾಗೂ ಇನ್ನೊರ್ವ ಸೇರಿ ನನ್ನನ್ನು ಜಾಹಿದ್ ಎಂಬಾತನ ರೂಮ್ ಗೆ ಕರೆದುಕೊಂಡು ಹೋಗಿದ್ದು ,ರೂಮ್ ನಲ್ಲಿ ರ‍್ಯಾಗಿಂಗ್ ಮಾಡಿದ್ದಾರೆ ಎಂದು ಅಲ್ಫಾಝ್ ತಿಳಿಸಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿ ಸಹಿತ ಕೆಲವು ವಿದ್ಯಾರ್ಥಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.