ಫೆಡರೇಶನ್ ಆಫ್ ಇಂಡಿಯಾ ಈಜು ಸ್ಪರ್ಧೆಗೆ ಆಯ್ಕೆ

ಫೆಡರೇಶನ್ ಆಫ್ ಇಂಡಿಯಾ ಈಜು ಸ್ಪರ್ಧೆಗೆ ಆಯ್ಕೆ


ಬಂಟ್ವಾಳ: ವಿದ್ಯಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಪುತ್ತೂರು  ಇವರ ಸಂಯುಕ್ತ ಆಯೋಜನೆಯಲ್ಲಿ ಬಾಲವನ ಈಜು ಕೋಲ 37ನೇ ರಾಷ್ಟ್ರೀಯ  ಈಜು ಚಾಂಪಿಯನ್ ಶಿಪ್  ಸ್ಪರ್ಧೆಯ 19ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅನರ್ಘ್ಯ ಎ ಆರ್  ಇವಳು 200 ಮೀಟರ್ ಇಂಡಿಯುಜುವಲ್ ಮೆಡ್ಲೆ ನಲ್ಲಿ ಚಿನ್ನದ ಪದಕ ಮತ್ತು 200 ಮೀಟರ್ ಬ್ಯಾಕ್ ಸ್ಟ್ರೋಕ್ , ಮತ್ತು 400 ಮೀ ಫ್ರೀಸ್ಟೈಲ್ ,  2 ಬೆಳ್ಳಿ ಪದಕ ಪಡೆದು ಗೋವಾದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಈಕೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ ಕೆ ನಾಯ್ಕ್, ಉಮೇಶ್ ವಿಟ್ಲ  ಮತ್ತು ಅಶೋಕ್ ದೇವಾಡಿಗ ಇವರ ಶಿಷ್ಯೆ ಯಾಗಿದ್ದು ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತುದಾರದ ಲೋಕರಾಜ್ ವಿಟ್ಲ ಮತ್ತು ತರಬೇತುದಾರರಾದ ಸಂಜಯ್ ಮತ್ತು ಗಗನ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.

ಅಶೋಕ್ ಕುಮಾರ್ ಬರಿಮಾರು ಮತ್ತು ರೋಹಿಣಿ. ಬಿ ಯವರ ಪುತ್ರಿಯಾಗಿದ್ದಾಳೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article