ಆಟೋರಿಕ್ಷಾ-ದ್ವಿಚಕ್ರ ವಾಹನ ನಡುವೆ ಅಪಘಾತ: ಯುವಕ ಸಾವು
Wednesday, November 4, 2026
ಬೆಳ್ತಂಗಡಿ: ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭಿಸಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ವೇಣೂರು ಸಮೀಪದ ಮೂಡುಕೋಡಿ ಪಂಜಲಬೈಲು ಎಂಬಲ್ಲಿ ನ.೩ರಂದು ಸಂಜೆ ನಡೆದಿದೆ.
ವೇಣೂರಿನಲ್ಲಿ ಚಿನ್ನದ ಮಳಿಗೆಯ ಶಾಖಾ ವ್ಯವಸ್ಥಾಪಕನಾಗಿ ಉದ್ಯೋಗದಲ್ಲಿದ್ದ ಪೆರಾಡಿ ಗ್ರಾಮದ ಸ್ವಸ್ತಿಕ್(26) ಮೃತ ಯುವಕ. ಇವರು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ಕರೆದೊಯ್ದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತ ಸ್ವಸ್ತಿಕ್ ತಾಯಿ ಹಾಗೂ ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.