ಮಂಗಳೂರಿನ ವೈದ್ಯ ಡಾ. ಬಿ.ಎಂ.ಝೀಶಾನ್ ಹಮೀದ್: ವಿಶ್ವದ ಅಗ್ರ ಶೇ. 2ರಷ್ಟು ವಿಜ್ಞಾನಿಗಳಲ್ಲಿ ಸ್ಥಾನ
Tuesday, November 3, 2026
ಮಂಗಳೂರು: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (KMC) ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗದ ಪ್ರಾಧ್ಯಾಪಕ ಹಾಗೂ ಹಿರಿಯ ಸಲಹೆಗಾರ ಡಾ. ಬಿ. ಎಂ. ಝೀಶಾನ್ ಹಮೀದ್ ಅವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ 2026ನೇ ಸಾಲಿನ ಅತಿ ಹೆಚ್ಚು ಸಂಶೋಧನಾ ಉಲ್ಲೇಖಗಳನ್ನು ಪಡೆದ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ವಿಶ್ವದ ಅಗ್ರ ಶೇ. 2ರಷ್ಟು ವಿಜ್ಞಾನಿಗಳಲ್ಲಿ ಒಬ್ಬರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
’ಯುರಾಲಜಿ ಮತ್ತು ನೆಫ್ರಾಲಜಿ’ (ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಶಾಸ್ತ್ರ) ಸಂಶೋಧನಾ ಉಪಕ್ಷೇತ್ರದಡಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 18 ಭಾರತೀಯ ಮೂತ್ರಶಾಸ್ತ್ರಜ್ಞರು, ನೆಫ್ರಾಲಜಿಸ್ಟ್ ಗಳು, ವೈದ್ಯರು ಮತ್ತು ವಿಜ್ಞಾನಿಗಳಲ್ಲಿ ಡಾ. ಝೀಶಾನ್ ಹಮೀದ್ ಕೂಡ ಒಬ್ಬರು. ವೈದ್ಯಕೀಯ ಸಂಶೋಧನೆ, ಅದರಲ್ಲೂ ಮೂತ್ರಶಾಸ್ತ್ರ, ಕೃತಕ ಬುದ್ಧಿಮತ್ತೆ (ಎಐ), ವೈದ್ಯಕೀಯ ಆವಿಷ್ಕಾರಗಳು ಮತ್ತು ಹೊಸ ಶಸ್ತ್ರಚಿಕಿತ್ಸಾ ತಂತ್ರಗಳ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳನ್ನು ಈ ಗೌರವ ಗುರುತಿಸಿದೆ.
2026ರ ಪಟ್ಟಿಯಲ್ಲಿ ಸ್ವಯಂ ಉಲ್ಲೇಖಗಳನ್ನು ಪರಿಗಣಿಸದೆ ಲೆಕ್ಕ ಹಾಕಿದ ಸಂಶೋಧನಾ ಸಾಧನೆಯ ಆಧಾರದಲ್ಲಿ ಡಾ. ಝೀಶಾನ್ ಹಮೀದ್ 3,01,034ನೇ ಸ್ಥಾನ ಪಡೆದಿದ್ದಾರೆ. ಸ್ವಯಂ ಉಲ್ಲೇಖಗಳನ್ನೂ ಸೇರಿಸಿ ಲೆಕ್ಕ ಹಾಕಿದಾಗ ಅವರ ಸ್ಥಾನ 2,71,380 ಆಗಿದೆ. 2025ರ ಅಂತ್ಯದ ವೇಳೆಗೆ ಅವರ ಎಚ್-ಇಂಡೆಕ್ಸ್ 11 ಇತ್ತು. 2025ರಲ್ಲಿ ಅವರ ಸಂಶೋಧನಾ ಪ್ರಬಂಧಗಳನ್ನು 828 ಬಾರಿ ಉಲ್ಲೇಖಿಸಲಾಗಿತ್ತು.