ನ.21 ರಂದು ‘ಕೊಲೊರೆಕ್ಟಲ್ ಕ್ಯಾನ್ಸರ್: ಮಾರ್ಗಸೂಚಿಗಳನ್ನು ಮೀರಿ ಚಿಕಿತ್ಸಾ ನಿರ್ಧಾರ’ ಕಾರ್ಯಕ್ರಮ
ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಡೆಸೆನಿಯಲ್ ಮೆಮೋರಿಯಲ್ ಹಾಲ್‌ನಲ್ಲಿ ನ. 21ರಂದು ‘ಕೊಲೊರೆಕ್ಟಲ್ ಕ್ಯಾನ್ಸರ್: ಮಾರ್ಗಸೂಚಿಗಳನ್ನು ಮೀರಿ ಚಿಕಿತ್ಸಾ ನಿರ್ಧಾರ’ ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 8.30ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 11ಕ್ಕೆ ಉದ್ಘಾಟನೆ ನೆರವೇರಲಿದೆ. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಜನರಲ್ ಸರ್ಜರಿ, ಸರ್ಜಿಕಲ್ ಆಂಕೊಲಾಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ, ವೈದ್ಯಕೀಯ ಆಂಕೊಲಾಜಿ ಮತ್ತು ವಿಕಿರಣ ಆಂಕೊಲಾಜಿ ವಿಭಾಗಗಳು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿವೆ ಎಂದು ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ರಾಕೇಶ್ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪುರಾವೆ, ಅನುಭವ ಮತ್ತು ಉತ್ತಮ ಫಲಿತಾಂಶಗಳು’ ಎಂಬ ಆಶಯದಡಿ ಕೊಲೊರೆಕ್ಟಲ್ ಕ್ಯಾನ್ಸರ್‌ಚಿಕಿತ್ಸೆಯಲ್ಲಿ ನಾನಾ ವಿಭಾಗಗಳ ತಜ್ಞರ ಸಹಯೋಗ ಹಾಗೂ ರೋಗಿಗೆ ತಕ್ಕ ಚಿಕಿತ್ಸಾ ನಿರ್ಧಾರಗಳ ಕುರಿತು ಚರ್ಚೆ ನಡೆಯಲಿದೆ. ಎಂಆರ್‌ಐ ಆಧಾರಿತ ಕ್ಯಾನ್ಸರ್‌ಹಂತ ನಿರ್ಧಾರ ಮತ್ತು ಶಸ್ತ್ರಚಿಕಿತ್ಸಾ ಯೋಜನೆ, ಗುದನಾಳದ ಕ್ಯಾನ್ಸರ್‌ಗೆ ಟೋಟಲ್ ನಿಯೋಅಡ್ಜುವಂಟ್ ಥೆರಪಿ, ಇಮ್ಯುನೊಥೆರಪಿ, ಮೆಟಾಸ್ಟಾಟಿಕ್ ಕೊಲೊರೆಕ್ಟಲ್ ಕ್ಯಾನ್ಸರ್‌ನಿರ್ವಹಣೆ ಮತ್ತು ಕೌಟುಂಬಿಕ ಕೊಲೊರೆಕ್ಟಲ್ ಕ್ಯಾನ್ಸರ್‌ತಪಾಸಣೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ. ಸಂಕೀರ್ಣ ಪ್ರಕರಣಗಳ ಕುರಿತು ತಜ್ಞರ ಸಂವಾದವೂ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಕರ್ನಾಟಕ ವೈದ್ಯಕೀಯ ಮಂಡಳಿಯ ಎರಡು ಕ್ರೆಡಿಟ್ ಪಾಯಿಂಟ್‌ಗಳ ಮಾನ್ಯತೆಯಿದ್ದು, ವೈದ್ಯರು, ಶಸ್ತ್ರಚಿಕಿತ್ಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಆರೋಗ್ಯ ಸೇವಾ ವೃತ್ತಿಪರರು ಭಾಗವಹಿಸಬಹುದು. ನೋಂದಣಿ ಉಚಿತವಾಗಿದೆ. ಆದರೆ ಭಾಗವಹಿಸುವ ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡೀನ್ ಡಾ. ಆಂಟನಿ ಸ್ಲೈವಾನ್ ಡಿಸೋಜ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಎಂ.ಕೆ, ರೇಡಿಯೊಥೆ ವಿಭಾಗದ ಮುಖ್ಯಸ್ಥ ಡಾ. ಸಂದೇಶ್ ರಾವ್,ಯೂನಿಟ್ ಡಿ ವಿಭಾಗದ ಮುಖ್ಯಸ್ಥ ಡಾ. ಪ್ರಥ್ವಿ ಶೆಟ್ಟಿ, ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಎಲ್ರಾಯ್ ಸಲ್ಡಾನ್ಹಾ ಹಾಗೂ ಡಾ.ಕೆಲ್‌ವೀನ್ ಪಾಯಸ್ ಉಪಸ್ಥಿತರಿದ್ದರು.