ನವೀಕರಿಸಬಹುದಾದ ಇಂಧನ
ಮಂಗಳೂರು: ಅಮೆಜಾನ್ 2030 ವೇಳೆಗೆ ದೇಶದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ 7 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ಕಂಪನಿಯು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ತನ್ನ ಹೂಡಿಕೆ ವ್ಯಾಪ್ತಿಯನ್ನುಗಣನೀಯವಾಗಿ ವಿಸ್ತರಿಸುವುದರ ಜೊತೆಗೆ, ಹೆಚ್ಚು ಸುಸ್ಥಿರ ಮತ್ತು ಸುಸ್ಥಿರತೆ ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಇಂಧನ ಭವಿಷ್ಯದತ್ತ ಭಾರತದ ಪರಿವರ್ತನೆಗೆ ಬೆಂಬಲ ನೀಡಲಿದೆ.
ಈಗಾಗಲೇ ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ 4 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿರುವುದರ ಜೊತೆಗೆ ಈ ಹೊಸ ಹೂಡಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಇಂಗಾಲದ ಹೊರಸೂಸುವಿಕೆ ಇಲ್ಲದ ಇಂಧನವನ್ನು ಖರೀದಿಸುವ ಭಾರತದ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅಮೆಜಾನ್ ಒಂದಾಗಿದೆ. ಅಮೆಜಾನ್ ಒಟ್ಟು 934 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ನಾಲ್ಕು ಹೊಸ ಬೃಹತ್ ಪ್ರಮಾಣದ ಪವನ ಮತ್ತು ಸೌರ ವಿದ್ಯುತ್ ಯೋಜನೆಗಳನ್ನು ಪ್ರಕಟಿಸಿದೆ.
ಈ ಹೊಸ ಗುರಿಯ ಪ್ರಕಾರ, 2019ರ ಮೂಲ ವರ್ಷಕ್ಕೆ ಹೋಲಿಸಿದರೆ, ಕಂಪನಿಯು ಬಳಸುವ ಪ್ರತಿ ಯೂನಿಟ್ವಿದ್ಯುತ್ನಿಂದ ಉಂಟಾಗುವ ಇಂಗಾಲದ ಹೊರಸೂಸುವಿಕೆ ಶೇ. 65ರಷ್ಟು ಕಡಿಮೆಯಾಗಲಿದೆ. ಜಾಗತಿಕವಾಗಿ ಇಂಧನದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಗುರಿಯು 2040ರ ವೇಳೆಗೆ ಇಂಗಾಲದ ನಿವ್ವಳ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವ ಅಮೆಜಾನ್ನ ’ಕ್ಲೈಮೇಟ್ ಪ್ಲೆಡ್ಜ್’ ಬದ್ಧತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ,ಇಂಧನ, ಶಿಕ್ಷಣ, ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ದ ಜೋಶಿ ತಿಳಿಸಿದ್ದಾರೆ.