ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮ ಡಿ.4 ರಿಂದ ಆರಂಭವಾಗಲಿದ್ದು, ಡಿ.7 ರಂದು ಸರ್ವಧರ್ಮ ಸಮ್ಮೇಳನ ಮತ್ತು ಡಿ.8 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. 

ಡಿ.7 ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 94ನೇ ಅಧಿವೇಶನವನ್ನು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸುವರು. ಬೆಂಗಳೂರಿನ ಅಹಿಂಸಾ ವಿಶ್ವಭಾರತಿ ಮತ್ತು ವಿಶ್ವಶಾಂತಿ ಕೇಂದ್ರದ ಸಂಸ್ಥಾಪಕ ಜೈನಮುನಿ ಆಚಾರ್ಯ ಲೋಕೇಶ ಮುನೀಜಿ ಅಧ್ಯಕ್ಷತೆ ವಹಿಸುವರು.

ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅಸ್ಲಂ ಮಿಯಾ ಮತ್ತು ಮಂಗಳೂರಿನ ಸೇಂಟ್ ಲಾರೆನ್ಸ್ ಚರ್ಚ್‌ನ ನಿರ್ದೇಶಕ ಸ್ವಾಮಿ ಬಾಸಿಲ್ವಾಸ್ ಉಪನ್ಯಾಸ ನೀಡುವರು. ಬೆಂಗಳೂರಿನ ಸಂಗೀತಗಾಯಕಿ ಶಿವಶ್ರೀ ತೇಜಸ್ವಿಸೂರ್ಯ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಡಿ.8 ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 94ನೇ ಅಧಿವೇಶನವನ್ನು ರಾಜ್ಯಪಾಲೆ ಸುಧಾ ಯಾದವ್ ಉದ್ಘಾಟಿಸುವರು. ವಾಗ್ಮಿ ವೈ.ವಿ.ಗುಂಡೂರಾವ್ ಅಧ್ಯಕ್ಷತೆ ವಹಿಸುವರು. ಲೇಖಕ ಮಂಜುನಾಥ ಅಜ್ಜಂಪುರ, ನಿವೃತ್ತ ಪ್ರಾಂಶುಪಾಲ ವರದರಾಜ ಚಂದ್ರಗಿರಿ, ಪ್ರಾಧ್ಯಾಪಕಿ ಪದ್ಮಿನಿ ನಾಗರಾಜು ಉಪನ್ಯಾಸ ನೀಡುವರು. ರಾಧೇ ಜಗ್ಗಿ ಬಳಗದವರಿಂದ ‘ಅನುಮಾರ್ಗ’ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 12 ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article