ಶ್ವೇತಾ ಕೆ.ಎಂ.ಗೆ ಡಾಕ್ಟರೇಟ್

ಶ್ವೇತಾ ಕೆ.ಎಂ.ಗೆ ಡಾಕ್ಟರೇಟ್


ಮಂಗಳೂರು: ತಾಲ್ಲೂಕಿನ ಮುತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಶ್ವೇತಾ ಕೆ.ಎಂ. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿದೆ.

ಶ್ವೇತಾ ಅವರು 'ಎಕ್ಸ್ ಪರಿಮೆಂಟಲ್ ಆ್ಯಂಡ್ ಥಿಯರಿಟಿಕಲ್ ಅಪ್ರೋಚ್ ಫಾರ್ ದಿ ಡೆವಲಪ್ ಮೆಂಟ್ ಆಫ್ ಕೊರೋಷನ್ ಇನ್ ಹಿಬಿಟರ್ಸ್ ಅಫ್ ಮೈಲ್ಡ್ ಸ್ಡೀಲ್' ವಿಷಯದ ಕುರಿತು ಶ್ರೀನಿವಾಸ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿಯ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ್‌ ಬಿ.ಎಂ. ಮಾರ್ಗದರ್ಶನ ಹಾಗೂ ಬೆಂಗಳೂರಿನ ರಾಮಯ್ಯ ಕಲೆ ಮತ್ತು ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಭರತ್‌ ಕೆ.ದೇವೇಂದ್ರ ಅವರ ಸಹಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಉಕ್ಕಿಗೆ ತುಕ್ಕು ಹಿಡಿಯುವಿಕೆಯನ್ನು ನಿಯಂತ್ರಿಸಲು ಇವರ‌ ಸಂಶೋಧನೆ ಸಹಕಾರಿಯಾಗಲಿದೆ.

ಜಗತ್ತಿನ ಅಗ್ರ ಕ್ವಾರ್ಟೈಲ್ ಶ್ರೇಯಾಂಕ (ಕ್ಯೂ1) ಹೊಂದಿರುವ ‘ಇಂಟರ್ನ್ಯಾಷನಲ್ ರಿಸರ್ಚ್ ಜರ್ನಲ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ರಿಸಲ್ಟ್ಸ್ ಇನ್ ಸರ್ಫೇಸಸ್ ಆ್ಯಂಡ್ ಇಂಟರ್ಫೇಸಸ್‌,  ಇನ್ಆರ್ಗ್ಯಾನಿಕ್ ಕೆಮಿಸ್ಟ್ರಿ ಕಮ್ಯುನಿಕೇಷನ್ಸ್, ಜರ್ನಲ್ ಆಫ್ ಆಲಾಯ್ಸ್‌ ಆ್ಯಂಡ್ ಕಾಂಪೌಂಡ್ಸ್ ಆ್ಯಂಡ್‌ ಕಮ್ಯುನಿಕೇಷನ್ಸ್, ಪ್ರೊಗ್ರೆಸ್ ಇನ್ ಎಂಜಿನಿಯರಿಂಗ್ ಸೈನ್ಸ್‌... ಮುಂತಾದ ಅಂತಾರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ ಅವರ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಮಂಜುನಾಥ- ಪ್ರೇಮಲತಾ ದಂಪತಿಯ ಪುತ್ರಿಯಾಗಿರುವ ಶ್ವೇತಾ ಪ್ರವೀಣ್ ಕುಮಾರ್ ಬಿ.ಎಚ್. ಅವರ ಪತ್ನಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article