ಸ್ಟಿಂಗ್ ಕಾರ್ಯಾಚರಣೆ ಮೂಲಕ ಜಿಲ್ಲೆಗೆ ಕೆಟ್ಟ ಹೆಸರು ತಂದದ್ದು ಬಿಜೆಪಿ

ಸ್ಟಿಂಗ್ ಕಾರ್ಯಾಚರಣೆ ಮೂಲಕ ಜಿಲ್ಲೆಗೆ ಕೆಟ್ಟ ಹೆಸರು ತಂದದ್ದು ಬಿಜೆಪಿ


ಮಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಕಾರ್ಯಾಚರಣೆ, ಬ್ಲಾಕ್ ಮೇಲ್ ರಾಜಕೀಯಗಳ ಬಗ್ಗೆ ದಿನಾಂಪ್ರತಿ ಸುದ್ದಿ ಆಗುತ್ತಿದ್ದು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಸ್ಟಿಂಗ್ ಕಾರ್ಯಾಚರಣೆ ಜಿಲ್ಲೆಗೆ ಕೆಟ್ಟ ಹೆಸರು ಎಂಬುದಾಗಿ ಹೇಳಿಕೆ ನೀಡಿದ್ದು, ರಾಜಕೀಯದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ತಂದ ಅಪಕೀರ್ತಿ ಇರೋದು ಬಿಜೆಪಿ ರಾಜಕಾರಣಿ, ಶಾಸಕರುಗಳಿಂದ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಬ್ಲೂಫಿಲಂ ನೋಡಿದ ಶಾಸಕರು ಬಿಜೆಪಿಯವರು, ತೋರ್ಸು ಚಿತ್ರ ವಿಡಿಯೋಗೆ ಕೋರ್ಟ್ ತಡೆಯಜ್ಞೆ ತಂದದ್ದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಗಳು, ಇತ್ತೀಚಿಗೆ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಕೋರ್ಟ್ ಮೂಲಕ ತಡೆಯಾಜ್ಞೆ ತಂದಿರೋದು ಸುದ್ದಿ ಆಗ್ತಾ ಇದೆ. 

ಈ ಪ್ರಕರಣದಲ್ಲಿ ಮಂಗಳೂರು ಕಾವೂರು ಪೊಲೀಸ್ ಠಾಣೆಯಲ್ಲಿ ಶಾಸಕರನ್ನು ಸ್ಟಿಂಗ್ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡ್ತಾ ಇದ್ದಾರೆ ಎಂದು ದೂರು ದಾಖಲಾಗಿದೆ, ಪೊಲೀಸರು ಈ ಪ್ರಕರಣದ ಪಾತ್ರದಾರಿಗಳನ್ನು ಕರೆಸಿ ತನಿಖೆ ನಡೆಸಿದ್ದಾರೆ, ಆದರೆ ಈ ಪ್ರಕರಣದ ಸೂತ್ರದಾರಿಗಳನ್ನು ತನಿಖೆ ಮಾಡಿಲ್ಲ. ಅವರು ಬಿಜೆಪಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಎಂಬುದಾಗಿ ಎಲ್ಲೆಡೆ ಪ್ರಚಾರ ಇದೆ, ಈ ಬಗ್ಗೆ ತನಿಖೆ ಮಾಡುವಂತೆ ಗ್ರಹಮಂತ್ರಿಗಳಿಗೆ ದೂರು ನೀಡಲಾಗುವುದು.

ಬಿಜೆಪಿ ಜಿಲ್ಲಾ ಅಧ್ಯಕ್ಷರು ಕೂಡ ತನಿಖೆಗೆ ಒತ್ತಾಯ ಮಾಡಲಿ ಹಾಗೂ ಸ್ಟಿಂಗ್ ವಿಡಿಯೋ ಬ್ಲಾಕ್ ಮೇಲ್ ರಾಜಕೀಯದ ಹಿಂದೆ ಇರುವ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ತಿಳಿಸಿ.

ಹಿಂದೊಮ್ಮೆ ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ವಿರುದ್ಧ ಕೂಡ ಇದೇ ರೀತಿಯ ಸ್ಟಿಂಗ್ ವಿಡಿಯೋ ಮಾಡಲು ಹೋಗಿ ಪೊಲೀಸ್ ದೂರು ದಾಖಲಾಗಿ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.

ರಾಜಕೀಯದಲ್ಲಿ ಸ್ಟಿಂಗ್ ವಿಡಿಯೋಗಳನ್ನು ಮಾಡಿಸುವುದು, ಈ ಮೂಲಕ ರಾಜಕಾರಣದಲ್ಲಿ ಸ್ಥಾನ ಪಡೆಯಲು ಹೊಂಚು ಹಾಕುವುದು ಇದು ಅತೀ ಕೀಳು ಮಟ್ಟದ, ಕೊಳಕು ರಾಜಕೀಯ. ಯಾವುದೇ ಪಕ್ಷ, ಯಾವುದೇ ವ್ಯಕ್ತಿಗಳು ಇಂತದ್ದನ್ನು ಮಾಡಿಸಿದ್ದರೂ ಇದು ಖಂಡನೀಯ. ಮತ್ತು ಕೊನೆಗೊಳ್ಳಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article