ರಾಮಾಂಜನೇಯ ಟ್ರೋಫಿ-2026: ವಿಶ್ವ ತುಳುವೆರ್, ಆಳ್ವಾಸ್, ಭಾರತೀ ಫ್ರೆಂಡ್ಸ್ ಹಾಗೂ ತೋಡಾರ್ ಫ್ರೆಂಡ್ಸ್ ಪ್ರಥಮ

ರಾಮಾಂಜನೇಯ ಟ್ರೋಫಿ-2026: ವಿಶ್ವ ತುಳುವೆರ್, ಆಳ್ವಾಸ್, ಭಾರತೀ ಫ್ರೆಂಡ್ಸ್ ಹಾಗೂ ತೋಡಾರ್ ಫ್ರೆಂಡ್ಸ್ ಪ್ರಥಮ


ಮೂಡುಬಿದಿರೆ: ಇಲ್ಲಿನ ಪೊನ್ನೆಚ್ಚಾರಿ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ವಿಭಾಗಕ್ಕೆ ನ. 1ರಂದು ನಡೆದ ಶ್ರೀ ರಾಮಾಂಜನೇಯ ಟ್ರೋಫಿ 2026- ಸೀಸನ್- 02  ಮೂಡುಬಿದಿರೆ ಹಗ್ಗ ಜಗ್ಗಾಟ (ಲೆವೆಲ್ ಮಾದರಿ )ದಲ್ಲಿ ಮೂಡುಬಿದಿರೆಯ ವಿಶ್ವ ತುಳುವೆರ್, ಆಳ್ವಾಸ್, ಭಾರತೀ ಫ್ರೆಂಡ್ಸ್ ಹಾಗೂ ತೋಡಾರ್ ಫ್ರೆಂಡ್ಸ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. 

ಮಹಿಳೆಯರ ಹಾಗೂ ಪುರುಷರ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಒಟ್ಟು 72 ತಂಡ ಭಾಗವಹಿಸಿದ್ದು ಅದರಲ್ಲಿ ಮಹಿಳೆಯರ ಒಟ್ಟು 14 ತಂಡ ಭಾಗವಹಿಸಿದ್ದವು.

ಹಗ್ಗಜಗ್ಗಾಟ ಫಲಿತಾಂಶ 

ಕಾಲೇಜು ವಿಭಾಗದಲ್ಲಿ (550+10 7 ಜನರ ) ಮೂಡುಬಿದಿರೆಯ ಆಳ್ವಾಸ್ ಕಾಲೇಜು ಪ್ರಥಮ,  

ಮಂಗಳೂರಿನ ಸಹ್ಯಾದ್ರಿ ಕಾಲೇಜಿನ 'ಎ'ತಂಡ ದ್ವಿತೀಯ ಬಹುಮಾನವನ್ನು ಗಳಿಸಿಕೊಂಡಿದೆ.

ಮಹಿಳಾ ವಿಭಾಗ (ದಕ್ಷಿಣ ಕನ್ನಡ, ಉಡುಪಿ ಹಾಗೂ ಮಂಜೇಶ್ವರ ತಾಲೂಕು ವಿಭಾಗ 560+5, 8+1 ಮಹಿಳೆಯರ)

ಮೂಡುಬಿದಿರೆಯ ವಿಶ್ವ ತುಳುವೆರ್ ಪ್ರಥಮ, ಮಂಜೇಶ್ವರದ ⁠ಕುಂಜತ್ತೂರುಮಹಾಲಿಂಗೇಶ್ವರ ದ್ವಿತೀಯ.  

ಪುರುಷರ 560+5kg ದಕ್ಷಿಣ ಕನ್ನಡ ಹಾಗೂ ಉಡುಪಿ ವಿಭಾಗ 7+1 ಜನರ ತಂಡದಲ್ಲಿ ಭಾರತೀ ಫ್ರೆಂಡ್ಸ್ ಕುಡ್ಪಲ್ತಡ್ಕ  (ಪ್ರಥಮ), ಮಿಜಾರ್ ಶಕ್ತಿಪ್ರಸಾದ್ ನಿಲಯ ಎ( ಜಟಾಯು ವಿಟ್ಲ) ದ್ವಿತೀಯ.

510ಕೆಜಿ ಅನ್ ಲಿಮಿಟೆಡ್ ದಕ್ಷಿಣ ಕನ್ನಡ, ಉಡುಪಿ , ಕಾಸರಗೋಡು ಟೌನ್ ವಿಭಾಗದಲ್ಲಿ ತೋಡಾರ್ ಫ್ರೆಂಡ್ಸ್ (PRS ಪೆರ್ಲ) ಪ್ರಥಮ ಹಾಗೂ ಟೀಮ್ ತುಳುನಾಡ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article