ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ


ಮೂಡುಬಿದಿರೆ: ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಪ್ರೀತಿ, ಗೌರವದಿಂದ ನಮ್ಮ ಭಾಷೆಯ ಬಗೆಗಿನ ಅಭಿಮಾನ ಶಾಶ್ವತವಾಗಿದ್ದಲ್ಲಿ ಮಾತ್ರ ಸಂಸ್ಕೃತಿಯ ಸೊಗಡು ಮುಂದಿನ ಪೀಳಿಗೆ ಅರಿಯಲು ಮತ್ತು ಆಚರಿಸಲು ಸಾಧ್ಯ"ಎಂದು ಸೈoಟ್ ಅಲೋಶಿಯಸ್ ಕಾಲೇಜಿನ ಕನ್ನಡ ಭಾಷಾ ವಿಭಾಗ ಮುಖ್ಯಸ್ಥೆ  ಜಾನೆಟ್ ಪಿಂಟೋ ಅಭಿಪ್ರಾಯಪಟ್ಟರು.

ಅವರು ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ  ಭಾನುವಾರ ಆಚರಿಸಿದ 71ನೇ ಕನ್ನಡ ರಾಜ್ಯೋತ್ಸವ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಕಾಲೇಜು ನಿರ್ದೇಶಕ ಡಾ. ಶರತ್ ಗೋರೆ ಮಾತನಾಡಿ, "ಕಾಲ ಬದಲಾಗುತ್ತಾ ಹೋದಂತೆ ನಮ್ಮ ಭಾಷೆಯ ಶೈಲಿ ಬದಲಾಗಬಾರದು. ಬದಲಿಗೆ ತನ್ನತನ, ಪ್ರಾಚೀನ ಸೊಗಡು, ಪರಂಪರೆಯನ್ನು ಉಳಿಸಿಕೊಂಡಾಗ ಭಾಷೆಯ ಸತ್ವ ಉಳಿಯಲು ಸಾಧ್ಯ" ಎಂದರು. 

ಕಾಲೇಜು ನಿರ್ದೇಶಕ ಮತ್ತು ಪ್ರಾಂಶುಪಾಲರಾದ ಡಾ. ಎಸ್.ಎನ್. ವೆಂಕಟೇಶ್ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆಯಲ್ಲಿ ಕಾಲೇಜು ನಿರ್ದೇಶಕರುಗಳಾದ ಮೆಹಬೂಬ ಬಾಷಾ, ಯೋಗೇಶ್ ಬೆಡೆಕರ್, ಚಂದ್ರಶೇಖರ ರಾಜೇ ಅರಸ್, ಸುಭಾಶ್ ಝಾ ಮತ್ತು ಕಾಲೇಜು ಆಡಳಿತಧಿಕಾರಿ  ಅರುಣ್ ಡಿಸಿಲ್ವ ಅವರು ಉಪಸ್ಥಿತರಿದ್ದರು. 

ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರವನ್ನು ಕನ್ನಡ ಉಪನ್ಯಾಸಕಿ ಆಶಿಕಾ ಕಿರಣ್ ನೆರವೇರಿಸಿದರು. 

ಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ಧನಶ್ರೀ ಕುಡ್ವ ಸ್ವಾಗತಿಸಿದರು.ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಜೊವಿಟ ವಂದನಾರ್ಪಣೆ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article