ನಿವೃತ್ತ ಶಿಕ್ಷಕಿ ಸಂಗೀತಾ ಅವರಿಗೆ ಸನ್ಮಾನಿಸಿ, ಬೀಳ್ಕೊಡುಗೆ

ನಿವೃತ್ತ ಶಿಕ್ಷಕಿ ಸಂಗೀತಾ ಅವರಿಗೆ ಸನ್ಮಾನಿಸಿ, ಬೀಳ್ಕೊಡುಗೆ


ಮೂಡುಬಿದಿರೆ: ಮಾಸ್ತಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವಾ ನಿವೃತ್ತಿ ಹೊಂದಿರುವ ಶಿಕ್ಷಕಿ ಸಂಗೀತಾ ಅವರನ್ನು ದಂಪತಿ ಸಹಿತ ಶಾಲೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡುವ ಕಾಯ೯ಕ್ರಮ ನಡೆಯಿತು.
 
ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಎಸ್ ಡಿಎಂಸಿ ಅಧ್ಯಕ್ಷ ಅಶೋಕ್ ಆಚಾರ್, ಮಾಜಿ ಅಧ್ಯಕ್ಷ ಪೃಥ್ವಿರಾಜ್,  ಸೆಲ್ವ ಕುಮಾರ್, ಹಳೆ ವಿದ್ಯಾಥಿ೯ ಶಿವಪ್ರಸಾದ್, ಶಿಕ್ಷಕಿ ಸಂಗೀತಾ ಅವರ ಪತಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ನಾಯರಿ ಉಪಸ್ಥಿತರಿದ್ದರು. 

ಮುಖ್ಯ ಶಿಕ್ಷಕಿ ಸೇಸಮ್ಮ ಸ್ವಾಗತಿಸಿದರು. ಗೌರವ ಶಿಕ್ಷಕಿ  ಜ್ಯೋತಿಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಮೋಹಿನಿ ಸನ್ಮಾನ ಪತ್ರ ವಾಚಿಸಿದರು. ಗೌರವ ಶಿಕ್ಷಕಿ ಹಷಿ೯ತಾ ಕಾಯ೯ಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ನಾಗರತ್ನಮ್ಮ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article