Udupi: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ: ‘ಪಂಚದುರ್ಗಾ ಹವನ’

Udupi: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ: ‘ಪಂಚದುರ್ಗಾ ಹವನ’


 ಉಡುಪಿ: ಉಡುಪಿ ಜಿಲ್ಲೆಯ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಡಿ.೨ ರಂದು ಸಹಸ್ರ ಚಂಡಿಕಾ ಯಾಗದ ವರ್ಧಂತಿ ಉತ್ಸವದ ಪ್ರಯುಕ್ತ ಬೆಳಿಗ್ಗೆ ೮ ಗಂಟೆಗೆ ಶ್ರೀ ಸನ್ನಿಧಿಯಲ್ಲಿ ಪ್ರಾರ್ಥನೆ, ೧೧.೩೦ ರಿಂದ ‘ಪಂಚದುರ್ಗಾ ಹವನ’ ಮಧ್ಯಾಹ್ನ ೧ ಗಂಟೆಗೆ ಪೂರ್ಣಾಹುತಿ, ವಿಶೇಷ ಪುಷ್ಪಾಲಂಕಾರ ಪೂಜೆ, ಪಲ್ಲಪೂಜೆ, ಮಹಾ ಮಂಗಳಾರತಿ ಹಾಗೂ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನೆರವೇರಿತು.

ಸಂಜೆ ೬ ಗಂಟೆಯಿಂದ ದೀಪಾರಾಧನೆ, ದುರ್ಗಾ ನಮಸ್ಕಾರ, ಸಾಮೂಹಿಕ ನಮಸ್ಕಾರ ಕಾರ್ಯಕ್ರಮ ಹಾಗೂ ರಾತ್ರಿ ೮ ಗಂಟೆಗೆ ದರ್ಶನ ಸೇವೆ ಮತ್ತು ಪ್ರಸಾದ ವಿತರಣೆ ನಡೆಯಿತು.

ದೇವಳದ ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ, ಕಾಪು ಪೇಟೆಯ ಹತ್ತು ಸಮಸ್ತರು, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article