Kundapura: ಜರ್ಮನಿ ಯುವತಿಯನ್ನು ವಿವಾಹವಾದ ಕುಂದಾಪುರ ಯುವಕ

Kundapura: ಜರ್ಮನಿ ಯುವತಿಯನ್ನು ವಿವಾಹವಾದ ಕುಂದಾಪುರ ಯುವಕ

 ಕುಂದಾಪುರ: ಕುಂದಾಪುರ ತಾಲೂಕಿನ ಆಜ್ರಿಯ ಯುವಕ ಜರ್ಮನಿಯ ಯುವತಿಯನ್ನು ಹಿಂದೂ ಸಾಂಪ್ರದಾಯದಂತೆ ಜನವರಿ ೧ ರಂದು ವಿವಾಹವಾಗಿದ್ದಾರೆ.

ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಎರಡು ಕುಟುಂಬದ ಹಿರಿಯರು ವಿವಾಹಕ್ಕೆ ಸಾಕ್ಷಿಯಾದರು.

ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಆಜ್ರಿಯ ಕರಿಮನೆ ಸುವರ್ಣ ಹಾಗೂ ಪಂಜು ಪುಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್ ಮತ್ತು ಪೀಟರ್ ಶ್ರೂಆರ್ ಮುನಿಸ್ತರ್ ಯುನಿಕಬ್ ದಂಪತಿಯ ಪುತ್ರಿ ಕಾರಿನ್ ದಾಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು.

ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬಿಕರೊಂದಿಗೆ ಮಾತುಕತೆ ಮಾಡಿದ್ದು ಎರಡು ಕುಟುಂಬಗಳು ಪರಸ್ಪರ ಚರ್ಚಿಸಿ ಮದುವೆಗೆ ಸಮ್ಮತಿಸಿದ್ದರು. ಅದರಂತೆ ಇವರ ವಿವಾಹ ನೆರವೇರಿದ್ದು, ಎರಡು ಕಡೆಯ ಬಂಧು-ಮಿತ್ರರು, ಹಿತೈಷಿಗಳು ಪಾಲ್ಗೊಂಡು ನವಜೋಡಿಗಳಿಗೆ ಶುಭಹಾರೈಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article