ಠೇವಣಿ ಮೇಲಿನ ಬಡ್ಡಿದರ ಹೆಚ್ಚಿಸಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

ಠೇವಣಿ ಮೇಲಿನ ಬಡ್ಡಿದರ ಹೆಚ್ಚಿಸಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್


ಮಂಗಳೂರು: ದೇಶದ ಪ್ರಮುಖ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು, ತನ್ನ ಪ್ರಮುಖ ಠೇವಣಿ ಯೋಜನೆಗಳಲ್ಲಿ ಒಂದಾದ ‘ವಿಕಾಸ ಆಶಾದೀಪ’ 400 ದಿನಗಳ ಠೇವಣಿ ಯೋಜನೆಯ ಮೇಲಿನ ಬಡ್ದಿದರವನ್ನು ಪರಿಷ್ಕರಿಸಿದ್ದು, ಹಿರಿಯ ನಾಗರಿಕರಿಗೆ ಗರಿಷ್ಠ 7.80% ಬಡ್ಡಿ ದೊರೆಯಲಿದೆ. ಹಾಗೆಯೇ ಈ ಪರಿಷ್ಕರಣೆಯ ಅನ್ವಯ ಜನಸಾಮಾನ್ಯರು 7.30% ಪಡೆಯಲಿದ್ದಾರೆ.

ಈ ವಿಷಯದ ಬಗ್ಗೆ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಮಾತನಾಡಿ, ಮಾರುಕಟ್ಟೆಯ ಪ್ರವೃತ್ತಿಗೆ ಅನುಗುಣವಾಗಿ ಠೇವಣಿ ಬಡ್ಡಿದರದವನ್ನು ಹೆಚ್ಚಿಸಲಾಗಿದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಬ್ಯಾಂಕಿನ ವಿವಿಧ ಠೇವಣಿ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವರು. ಪರಿಷ್ಕೃತ ದರ ಶನಿವಾರದಿಂದಲೇ ಅನ್ವಯವಾಗಲಿದ್ದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲೇ ಠೇವಣಿ ಮಾಡುವ ಮೂಲಕ ಗ್ರಾಮೀಣಾಭಿವೃದ್ಧಿಯಲ್ಲಿ ಪರೋಕ್ಷವಾಗಿ ಪಾಲುಗೊಳ್ಳಲು ಅವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article