
ವಿವಾಹಿತೆಯ ಸಾವು: ಸಂಶಯಾಸ್ಪದ ಸಾವೆಂದು ಹೆತ್ತವರ ದೂರು
ಮೂಡುಬಿದಿರೆ: ಬೆಳ್ತಂಗಡಿ ತಾಲೂಕಿನ ಮರೋಡಿಯ ವಿವಾಹಿತ ಮಹಿಳೆ ವಾಣಿಶ್ರೀ ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ಸಾವನ್ನಪ್ಪಿದ್ದು ಈ ಸಾವಿನಲ್ಲಿ ಆಕೆಯ ಪತಿಯ ಬಗ್ಗೆ ತಮಗೆ ಸಂಶಯವಿದ್ದು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಹೆತ್ತವರು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೊಸ್ಮಾರು ಈದುವಿನ ವಾಣಿಶ್ರೀಯನ್ನು ಕಳೆದ 1.3 ವಷ೯ದ ಹಿಂದೆ ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ಪಚ್ಚಾಡಿ ಪ್ರಶಾಂತ್ ಕೋಟ್ಯಾನ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಆಕೆಯ ಪತಿ ಪ್ರಶಾಂತ್ ಕೋಟ್ಯಾನ್ ಬೇರೆ ಹೆಂಗಸಿನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಸಂಶಯದಲ್ಲಿ ಗಂಡ ಹೆಂಡತಿ ಮಧ್ಯೆ ಮಾತಿನ ಚಕಾಮಕಿ ನಡೆಯುತ್ತಿದ್ದು ಇದೇ ವಿಚಾರದಲ್ಲಿ ವಾಣಿಶ್ರೀ ಮಾನಸಿಕವಾಗಿ ಕುಗ್ಗಿ ಅನಾರೋಗ್ಯಕ್ಕೆ ತುತ್ತಾಗಿದ್ದು ಈ ಸಂದಭ೯ ಆಕೆಯನ್ನು ಯಾರೂ ಚಿಕಿತ್ಸೆಗೆ ಒಳಪಡಿಸಿಲ್ಲ ಇದರಿಂದ ತೀವೃ ತರಹದ ಅನಾರೋಗ್ಯ ಕಾಡಿತ್ತು.
ಸೋಮವಾರ ಆಕೆಯ ಹೆತ್ತವರು ಮೊಬೈಲ್ ಕರೆ ಮಾಡಿದಾಗ ವಿಷಯ ಗೊತ್ತಾಗಿದ್ದು ತಕ್ಷಣ ಆಕೆಯನ್ನು ಹೊಸ್ಮಾರುವಿನಲ್ಲಿರುವ ಪ್ರಸಾದ್ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಬಿಪಿ ಲೋ ಆಗಿದೆ ಎಂದು ತಿಳಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೂಡುಬಿದಿರೆಯ ಜಿ.ವಿ ಪೈ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ ಸುಮಾರು 12.45 ಗಂಟೆಗೆ ಮೃತಪಟ್ಟಿದ್ದಾರೆ.
ಈ ಸಾವಿನ ಬಗ್ಗೆ ಬಗ್ಗೆ ತಮಗೆ ಸಂಶಯ ಇದ್ದು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.