
35 ಕಬ್ಬಿಣದ ತಗುಡು ಶೀಟು ಕಳವು: ಜೀತೋ ವಾಹನದಲ್ಲಿ ಲೋಡ್ ಮಾಡುವ ದೃಶ್ಯ ಸಿ.ಸಿ. ಕ್ಯಾಮರದಲ್ಲಿ ಸೆರೆ
ಬಂಟ್ವಾಳ: ವೆಲ್ಡಿಂಗ್ ಮತ್ತು ರಿಪೇರಿಗೆಂದು ಇಂಡಸ್ಟ್ರೀಸ್‌ನಲ್ಲಿ ವೆಲ್ಡಿಂಗ್‌ಗಾಗಿ ಇರಿಸಲಾಗಿದ್ದ ಸುಮಾರು 35 ಕಬ್ಬಿಣದ ತಗುಡು ಶೀಟುಗಳನ್ನು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಸಂತೋಷ್ ಅಂಚನ್ ಎಂಬವರು ಅಲ್ಲಿಪಾದೆಯಲ್ಲಿರುವ ಹನುಮಾನ್ ಇಂಡಸ್ಟ್ರೀಸ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಜು.12 ರಂದು ವೆಲ್ಡಿಂಗ್ ಮತ್ತು ರಿಪೇರಿಗೆಂದು ಇವರ ಇಂಡಸ್ಟ್ರೀಸ್‌ಗೆ ಸುಮಾರು 35 ಶೀಟುಗಳು ಬಂದಿತ್ತು, ಅಂದು ರಾತ್ರಿ ಅಂಗಡಿಗೆ ಬೀಗ ಹಾಕಿ ಹೋಗಿದ್ದು, ಮರುದಿನ ಭಾನುವಾರವಾಗಿದ್ದರಿಂದ ಅಂಗಡಿಯ ಬಾಗಿಲು ತೆರೆದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಜು.14 ರಂದು ಬೆಳಗ್ಗೆ ಅಂಗಡಿಗೆ ಬಂದಾಗ ಈ 35 ಶೀಟುಗಳು ಕಾಣೆಯಾಗಿತ್ತು. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದಿದ್ದು, ಅಂಗಡಿಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಜು.12 ರಂದು ರಾತ್ರಿ 10.20 ಗಂಟೆಗೆ ಯಾರೋ ಅಪಚರಿತ ವ್ಯಕ್ತಿಗಳು ಜೀತೋ ವಾಹನದಲ್ಲಿ ಬಂದು ಪಿರ್ಯಾದಿದಾರರ ಅಂಗಡಿಯಲ್ಲಿದ್ದ 35 ಕಬ್ಬಿಣದ ತಗಡಿನ ಶೀಟುಗಳನ್ನು ಲೋಡ್ ಮಾಡಿ ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಕಳವಾದ ಕಬ್ಬಿಣದ ಶೀಟುಗಳ ಮೌಲ್ಯ 63 ಸಾ.ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.