
ಡಿಕೆಶಿ ಸತ್ಯ ಮಾತನಾಡಿದ್ದಾರೆ: ಯಶಪಾಲ್ ಸುವರ್ಣ
Friday, February 28, 2025
ಉಡುಪಿ: ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ ಭಾರತೀಯರು ಮತ್ತು ವಿದೇಶೀಯರು ಪುಣ್ಯವಂತರು. ಹಿಂದುತ್ವದ ರಾಷ್ಟ್ರದ ಪರಿಕಲ್ಪನೆ ಇದ್ದವರು ಪುಣ್ಯಸ್ನಾನ ಮಾಡಿದ್ದಾರೆ. ಕಾಂಗ್ರೆಸ್‌ನ ಇತಿಹಾಸದಲ್ಲಿ ಸತ್ಯ ಮಾತನಾಡಿದ್ದು ಡಿಕೆಶಿ ಮಾತ್ರ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ಪಾವಿತ್ರಯತೆ, ಹಿಂದೂ ಧರ್ಮದ ವಿಚಾರ ಬಗ್ಗೆ ಡಿಕೆಶಿ ಬಹಿರಂಗವಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಮತ ಬ್ಯಾಂಕಿಗೋಸ್ಕರ ಈವರೆಗೆ ಸುಳ್ಳನ್ನೇ ಮಾತನಾಡುತ್ತಾ ಬಂದಿತ್ತು. ಕಾಂಗ್ರೆಸ್ ಪಕ್ಷದ ಒಳಗಿನ ವಿಚಾರದ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ ಈ ಬೆಳವಣಿಗೆ ದುಬಾರಿಯಾಗುತ್ತದೆಯೋ, ಸಹಕಾರಿಯಾಗುತ್ತದೆಯೋ ಎಂಬ ಚರ್ಚೆ ಮಾಡುವುದಿಲ್ಲ. ಡಿಕೆಶಿ. ಹೇಳಿಕೆಯನ್ನು ನಾನು ಸ್ವಾಗತಿಸುವುದಾಗಿ ಯಶಪಾಲ್ ತಿಳಿಸಿದರು.