ಜಿಲ್ಲಾ ಹೆಗ್ಗಡೆ ಸಂಘದಿಂದ ರೂ 7.42 ಲಕ್ಷ  ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

ಜಿಲ್ಲಾ ಹೆಗ್ಗಡೆ ಸಂಘದಿಂದ ರೂ 7.42 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ


ಮೂಡುಬಿದಿರೆ: ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಇದರ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಭಾನುವಾರ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಹೆಗ್ಗಡೆ ಸಮಾಜದ 177 ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸುಮಾರು 7.42 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಮುಂಬಯಿ ಹೆಗ್ಗಡೆ ಸಂಘದ ಪ್ರತಿನಿಧಿ ಪ್ರಭಾವತಿ ಜನಾರ್ಧನ ಹೆಗ್ಡೆ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ  ಉದ್ದೇಶದಿಂದ ಪ್ರತಿ ವರ್ಷ ಜಿಲ್ಲಾ ಹೆಗ್ಗಡೆ ಸಂಘಕ್ಕೆ ಮುಂಬಯಿ ಹೆಗ್ಗಡೆ ಸಂಘವು ಆರ್ಥಿಕ ಸಹಕಾರ ನೀಡುತ್ತಾ ಬಂದಿದೆ. ಮುಂಬಯಿ ಹೆಗ್ಗಡೆ ಸಂಘ ನೀಡುವ ಬಡ್ಡಿರಹಿತ ಶೈಕ್ಷಣಿಕ ಸಾಲದ ಸದುಪಯೋಗವನ್ನು ಕೂಡ ವಿದ್ಯಾರ್ಥಿಗಳು  ಪಡಕೊಳ್ಳುವಂತೆ ಅವರು ತಿಳಿಸಿದರು‌.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ ಮಾತನಾಡಿ, ಸಂಘವನ್ನು ಬಲಪಡಿಸಲು ವಲಯವಾರು ಸಮಿತಿಗಳ ರಚನೆಗೆ ಆದ್ಯತೆ ನೀಡಲಾಗುತ್ತಿದೆ. ಸಂಘದ ಹೊಸ ಬೈಲಾವನ್ನು ಆದಷ್ಟು ಬೇಗ ಅಂತಿಮಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. 

ಸಾಧಕ ವಿದ್ಯಾರ್ಥಿಗಳಾದ ಡಾ.ಧೀರಜ್ ಹೆಗ್ಡೆ, ಸಿ.ಎ ದೀಪಕ್ ಹೆಗ್ಡೆ, ಸುಹರ್ಷ ಹೆಗ್ಡೆ, ವಿರಾಟ್ ಆರ್. ಹೆಗ್ಡೆ ಇವರನ್ನು ಗೌರವಿಸಲಾಯಿತು. 

ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಸಂಘದ ಗೌರವ ಸಲಹೆಗಾರರಾದ ಸುರೇಂದ್ರ ಕುಮಾರ್ ಹೆಗ್ಡೆ, ಸದಾಶಿವ ಹೆಗ್ಡೆ, ಮುಂಬಯಿ ಸಂಘದ ಖಾಯಂ ಪ್ರತಿನಿಧಿ ರವಿ ಹೆಗ್ಡೆ ಹೆರ್ಮುಂಡೆ ಮಾತನಾಡಿದರು. 

ಹೆಗ್ಗಡೆ ಸಂಘದ ಕಾರ್ಯದರ್ಶಿ ಶುಭರಾಜ ಹೆಗ್ಡೆ ಸಂಘದ ವರದಿ ವಾಚಿಸಿದರು. ಸಂಘದ ಸದಸ್ಯ ದಯಾನಂದ ಹೆಗ್ಡೆ ಅನಾರೋಗ್ಯ ಪೀಡಿತರಿಗೆ ನೆರವಾಗಲು ಸಹಾಯ ನಿಧಿ ಆರಂಭಿಸುವ ಪ್ರಸ್ತಾಪವನ್ನು ಸಭೆಯ ಮುಂದಿಟ್ಟರು. 

ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಅನಿಲ್ ಹೆಗ್ಡೆ ದೇವಸ್ಥಾನದ ಲೆಕ್ಕಪತ್ರ ಮಂಡಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ದೇವಸ್ಥಾನದ ಮೊಕ್ತೇಸರರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ  ನಳಿನಿ ಆರ್‌. ಹೆಗ್ಡೆ, ಯುವ ಘಟಕದ ಅಧ್ಯಕ್ಷ  ಧೀರಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. 

ಸುಂದರ ಹೆಗ್ಡೆ ವೇಣೂರು ಮತ್ತು ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article