Chikkamagaluru: ಫ್ರೀ ಮೈ ಟ್ರಿಪ್ ಸಂಸ್ಥೆಯ ಉತ್ತೇಜನ ಪ್ರಶಂಸನೀಯ

Chikkamagaluru: ಫ್ರೀ ಮೈ ಟ್ರಿಪ್ ಸಂಸ್ಥೆಯ ಉತ್ತೇಜನ ಪ್ರಶಂಸನೀಯ


ಚಿಕ್ಕಮಗಳೂರು: ಸರ್ಕಾರಿ ಶಾಲೆಯ ಮಕ್ಕಳ ಪ್ರವಾಸಕ್ಕೆ ಫ್ರೀ ಮೈ ಟ್ರಿಪ್ ಸಂಸ್ಥೆ ಉತ್ತೇಜಿಸುತ್ತಿರುವುದು ಪ್ರಶಂಸನೀಯ ಈ ರೀತಿಯ ಕಾರ್ಯಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕೆಂಪನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಮೇಕ್ ಫ್ರೀ ಟ್ರಿಪ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಉಚಿತ ಪ್ರವಾಸ ಹಾಗೂ ಪ್ಯಾನ್ಸಿ ಅಡ್ವಂಚರ್ ಮತ್ತು ಇವೆಂಟ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಮಕ್ಕಳನ್ನು ಉಚಿತವಾಗಿ ಪ್ರವಾಸ ಕಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದ ಅವರು, ಇಂತಹ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾ ಣದಲ್ಲಿ ನಡೆಯಬೇಕು. ಮಕ್ಕಳು ಬೇರೆ ಬೇರೆ ಪ್ರವಾಸಿಕೇಂದ್ರಗಳಿಗೆ ತೆರಳಿ ಅಲ್ಲಿನ ವೈವಿದ್ಯತೆ ಮತ್ತು ಕ್ಷೇತ್ರದ ಮಹಿಮೆಯನ್ನು ಅರಿಯುವಂ ತಾಗಬೇಕು ಎಂದರು.  

ಸರ್ಕಾರಿ ಶಾಲೆಯ ಮಕ್ಕಳು ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆಯನ್ನು ಬಿಟ್ಟು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಗಳನ್ನು ಅಲಂಕರಿಸಬೇಕು. ಜತೆಗೆ ಈ ನಾಡಿಗೆ ಮತ್ತು ತಾವು ಓದಿದ ಶಾಲೆಗೆ ಕೀರ್ತಿ ತೆರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಇದುವರೆಗೂ 13 ದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ, ನಮ್ಮ ದೇಶದಲ್ಲಿನ ಸಂಸ್ಕೃತಿ, ಇಲ್ಲಿನ ಪರಿಸರವನ್ನು ಎಲ್ಲಿಯೂ ನೋಡಿಲ್ಲ. ಭಾರತ ದಲ್ಲಿ ಜನಿಸಿದ ನಾವುಗಳೇ ಪುಣ್ಯವಂತರು ಎಂದು ಹೇಳಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿತಾಣಗಳಿದ್ದು, ಇಲ್ಲಿಗೆ ಸಾವಿ ರಾರು ಜನ ಪ್ರವಾಸಿಗರು ಬರುತ್ತಾರೆ ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಭಾಗ್ಯವಂತರು ಎಂದು ತಿಳಿಸಿದರು.

ಪ್ಯಾನ್ಸಿ ಅಡ್ವಂಚರ್ ಮತ್ತು ಇವೆಂಟ್ಸ್‌ನ ಡಾ|ಗೀತಾ ಮಾತನಾಡಿ, ಎಕೋ ಟೂರಿಸಂಗೆ ನಮ್ಮ ಸಂಸ್ಥೆ ಹೆಚ್ಚಿನ ಆದ್ಯತೆ ನೀಡಲಿದೆ. ಪ್ಯಾನ್ಸಿ ಅಡ್ವಂಚರ್ ಮತ್ತು ಇವೆಂಟ್ಸ್‌ನಿಂದ ಸೈಕಲಿಂಗ್, ಟ್ರಕ್ಕಿಂಗ್ ಸೇರಿದಂತೆ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಇಂದು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಎಲ್ಲೆಂದರಲ್ಲಿ ಮನಸೋಇಚ್ಚೆ ಓಡಾಡುತ್ತಿದ್ದು, ಅವರಿಗೆ ಉತ್ತಮ ರೀತಿಯ ಪ್ರವಾಸವನ್ನು ಕಲ್ಪಿಸಿಕೊಡುವುದು ಎಕೋ ಟೂರಿಸಂನ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಫ್ರೀ ಮೈ ಟ್ರಿಪ್‌ನ ವ್ಯವಸ್ಥಾಪಕ ಲತೀಫ್, ರಾಧಿಕಾ, ಅಂಕಿತ, ಪ್ರದೀಪ್, ಶಾಲಾ ಮುಖ್ಯೋಪಾಧ್ಯಾಯ ಸೇರಿದಂತೆ ಅನೇಕರು ಇದ್ದರು. ಇದೇ ವೇಳೆ ಕೆಂಪನಹಳ್ಳಿ ಸರ್ಕಾರಿ ಶಾಲೆಯ 50 ವಿದ್ಯಾರ್ಥಿಗಳು ಮೈಸೂರು ಪ್ರವಾಸಕ್ಕೆ ತೆರಳಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article