ಬಜಾಲ್ ನಂತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ‘ಸ್ಪೋರ್ಟ್ಸ್ ಮೀಟ್’
Saturday, December 27, 2025
ಮಂಗಳೂರು: ಬಜಾಲ್ ನಂತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಿಂದ ವಾರ್ಷಿಕ ‘ಸ್ಪೋರ್ಟ್ಸ್ ಮೀಟ್’ ಕಾರ್ಯಕ್ರಮ ಬಜಾಲ್ ನಂತೂರಿನ ಸಾಗರ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಜಾಲ್ ನಂತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ, ಮನಪಾ ಮಾಜಿ ಸದಸ್ಯ ಅಬ್ದುಲ್ ರವೂಫ್ ಅವರು, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳು ಸಹಕಾರಿಯಾಗಿದೆ. ಕ್ರೀಡೆಯಿಂದ ಮಕ್ಕಳಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬದಲಾವಣೆಗೆ ಒತ್ತು ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ರೂಪಿಸಲು ಕ್ರೀಡೆಗಳು ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ 2025ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಲಾ ಉಪಾಧ್ಯಕ್ಷ, ಮನಪಾ ಮಾಜಿ ಸದಸ್ಯ ಕೆ.ಇ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಜಾಲ್ ನಂತೂರ್ ಕ್ಲಸ್ಟರ್ ಸಿಆರ್‌ಪಿ ನಿರ್ಮಲ ವಿಲ್ಮಾ ರೋಡ್ರಿಗಸ್ ಪ್ರಾಸ್ತಾವಿಕ ಮಾತನಾಡಿದರು. ಮೊಯ್ದೀನ್ ಕುಂಞಿ ಧ್ವಜಾರೋಹಣ ನೇರವೇರಿಸಿದರು.
ಉಪಾಧ್ಯಕ್ಷ ಹನೀಫ್ ಎಚ್.ಎಸ್., ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಸಂಚಾಲಕ ಬಿ. ಫಕ್ರುದ್ದೀನ್, ಕಾರ್ಯದರ್ಶಿಗಳಾದ ಎಂ. ಹನೀಫ್ ಕೆಳಗಿನ ಮನೆ, ಮೊಹಮ್ಮದ್ ಅಶ್ರಫ್ ತೋಟ, ನಝೀರ್ ಬಜಾಲ್, ಇಕ್ಬಾಲ್ ಅಹ್ಸನಿ, ಶಾಲಾ ಮೇಲ್ವಿಚಾರಕಿ ಖೈರುನ್ನಿಸ, ದೈಹಿಕ ಶಿಕ್ಷಕ ಸುರೇಶ್ ಕುಮಾರ್, ಸಹಶಿಕ್ಷಕಿ ನೌಶೀನ್ ಹಾಗೂ ಶಾಲಾ ಶಿಕ್ಷಕ ವೃಂಧ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶರತ್ ಮಾಸ್ಟರ್ ಸ್ವಾಗತಿಸಿದರು. ಸಹಶಿಕ್ಷಕಿ ಗಾಯತ್ರಿ ವಂದಿಸಿ, ವಿದ್ಯಾರ್ಥಿನಿ ರಿನಾಝ್ ಕಾರ್ಯಕ್ರಮ ನಿರೂಪಿಸಿದರು.





