Kasaragodu: ಗಾಂಜಾ ಸಾಗಾಟ-ಇಬ್ಬರ ಬಂಧನ

Kasaragodu: ಗಾಂಜಾ ಸಾಗಾಟ-ಇಬ್ಬರ ಬಂಧನ


ಕಾಸರಗೋಡು: ಪಿಕಪ್ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾವನ್ನು ಅಬಕಾರಿ ದಳದ ವಿಶೇಷ ತಂಡ ಪೆರ್ಲದಲ್ಲಿ ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂಬಳೆ ಶಾಂತಿಪಳ್ಳದ ಶಹೀನ್ ರಹೀಂ (36) ಮತ್ತು ಪೆರ್ಲ ಅಮ್ಮೆಕ್ಕಳದ ಶರೀಫ್ (32) ಎಂದು ಗುರುತಿಸಲಾಗಿದೆ.

ಅಬಕಾರಿ ದಳದ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯಂತೆ ಪೆರ್ಲ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಪಿಕಪ್ ವ್ಯಾನ್ ಅನ್ನು ತಡೆದು ತಪಾಸಣೆ ನಡೆಸಿದಾಗ ಬಚ್ಚಿಟ್ಟು ಸಾಗಿಸುತ್ತಿದ್ದ ಸುಮಾರು ೧೦೭ ಕಿಲೋ ಗಾಂಜಾ ಪತ್ತೆಯಾಗಿದೆ. ಆಂಧ್ರ ಪ್ರದೇಶದಿಂದ ಬೆಂಗಳೂರು ಮಾಗ್ರವಾಗಿ ಈ ಗಾಂಜಾವನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಅಬಕಾರಿ ದಳದ ಸಿಬ್ಬಂದಿ ತಿಳಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article