Kundapura: ಫೆ.20-21: ಕುಂದಾಪುರ ಮಾರಿ ಜಾತ್ರೆ
Sunday, February 18, 2024
ಕುಂದಾಪುರ: ಇಲ್ಲಿನ ಖಾರ್ವಿಕೇರಿಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಮಾರಿ ಜಾತ್ರೆಯು ಫೆ.20 ಮತ್ತು 21 ರಂದು ನಡೆಯಲಿದೆ.
ಫೆ.20 ರಂದು ರಾತ್ರಿ 8 ಗಂಟೆಗೆ ಅಮ್ಮನವರಿಗೆ ತುಲಾಭಾರ ಸೇವೆ, ಮಡಿಲು ತುಂಬುವುದು. ರಾತ್ರಿ 9.30ಕ್ಕೆ ಸೇವಾ ಕರ್ತರಿಂದ ‘ಅನ್ನ ಸಂತರ್ಪಣೆ’ ಕಾರ್ಯಕ್ರಮ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಬಳಿಕ ದೋಸೆ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.