Udupi: ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರದಲ್ಲಿ ವಿಶ್ವ ಹಸಿವು ದಿನಾಚರಣೆ

Udupi: ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರದಲ್ಲಿ ವಿಶ್ವ ಹಸಿವು ದಿನಾಚರಣೆ


ಉಡುಪಿ: ಇಲ್ಲಿನ ಶಂಕರಪುರದ ಶ್ರೀ ದ್ವಾರಕಾಮಾಯಿ ಸಾಯಿಬಾಬ ಮಂದಿರದಲ್ಲಿ ವಿಶ್ವ ಹಸಿವು ದಿನಾಚರಣೆ ಕಾರ್ಯಕ್ರಮ ಮೇ.28 ರಂದು ನಡೆಯಿತು.

ಈ ಸಂದಭ೯ದಲ್ಲಿ ಮುಷ್ಠಿ ಅಕ್ಕಿ ಅಭಿಯಾನದ ಚಾಲನೆ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಬಿಜೆಪಿ ಮಹಿಳಾ ಮೋಚಾ೯ ಮಾಜಿ ಜಿಲ್ಲಾದ್ಯಕ್ಷೆ ವೀಣಾ ಶೆಟ್ಟಿ ಕ್ಷೇತ್ರದ ವತಿಯಿಂದ ಸಾಯಿ ತುತ್ತು ಯೋಜನೆ ಮೂಲಕ ಸಾವಿರಾರು ನಿಗ೯ತಿಕರಿಗೆ ಅನ್ನದಾನ ನಡೆಯುತ್ತಿದೆ. ಈ ಮೂಲಕ ಹಸಿವು ಮುಕ್ತ ಸಮಾಜದ ನಿಮಾ೯ಣಕ್ಕೆ ಗುರೂಜಿಯವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕ್ಷೇತ್ರದ ಶ್ರೀ ಸಾಯಿ ಈಶ್ವರ್ ಗುರೂಜಿ ಸಾಯಿ ತುತ್ತು ಯೋಜನೆ ರಾಜ್ಯದಲ್ಲೆಡೆ ವಿಸ್ತರಿಸುವ ಸಂಕಲ್ಪ ಹೊಂದಲಾಗಿದ್ದು, ಪ್ರತಿಯೊಂದು ಕುಟುಂಬ ಒಂದು ಮುಷ್ಟಿ ಅಕ್ಕಿಯನ್ನು ಸಮಾಜದ ನಿಗ೯ತಿಕರಿಗೆ ನೀಡಲು ತೆಗೆದಿಡಬೇಕು. ಆ ಮೂಲಕ ಹಸಿವು ಮುಕ್ತ ದೇಶದ ನಿರ್ಮಾಣಕ್ಕೆ ನಾವೆಲ್ಲರೂ ಕಂಕಣಭದ್ಧರಾಗಬೇಕು. ಕ್ಷೇತ್ರದ ವತಿಯಿಂದ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತಿದ್ದು ಇದು ಎಲ್ಲರ ಸಹಕಾರದಿಂದ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿರುವುದು ಸಂತೋಷದಾಯಕ ಎಂದರು.

ಪ್ರಕಾಶ್ ಆಚಾರ್ಯ, ವಿಜಯ ಕುಂದರ್, ನಾರಾಯಣ ಪೂಜಾರಿ, ಶಿಲ್ಪಾ ಮಹೇಶ್, ಶ್ವೇತಾ ಜಯರಾಮ್, ಭಾರತಿ, ಸಂಧ್ಯಾ ರಾಜೇಶ್, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ನಿಲೇಶ್ ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ, ವಂದಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article