Ujire: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇಳದ ತ್ರಿದಿನ ಸೇವೆಯ ಬಯಲಾಟ ಪ್ರದರ್ಶನ
Wednesday, May 29, 2024
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮೂರು ದಿನಗಳ ಸೇವೆಯಾಟವು ಮೇ.25 ರಿಂದ 27ರವರೆಗೆ ಪೌರಾಣಿಕ ಪ್ರಸಂಗದ ಪ್ರದರ್ಶನದೊಂದಿಗೆ ಪ್ರಸಕ್ತ ಸಾಲಿನ ಯಕ್ಷಗಾನ ಮೇಳದ ತಿರುಗಾಟಕ್ಕೆ ಮಂಗಳ ಹಾಡಿದೆ.
ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮೇಳದ ಯಜಮಾನ ಡಿ.ಹರ್ಷೇನ್ದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮೇ.25 ರಂದು ‘ರಾಮ ರಾಮ ಶ್ರೀರಾಮ’, ಮೇ.26 ರಂದು ‘ದಕ್ಷ ಯಜ್ಞ-ಗಿರಿಜಾ ಕಲ್ಯಾಣ’ ಹಾಗೂ ಮೇ.27 ರಂದು ‘ಕಲ್ಯಾಣತ್ರಯ’ (ರುಕ್ಮಿಣಿ ಕಲ್ಯಾಣ-ಜಾಂಬವತಿ ಕಲ್ಯಾಣ-ರತಿ ಕಲ್ಯಾಣ) ಪ್ರಸಂಗಗಳನ್ನು ಮೇಳದ ಹಾಗೂ ಅತಿಥಿ ಕಲಾವಿದರು ಯಶಸ್ವಿಯಾಗಿ ಪ್ರದರ್ಶಿಸಿದರು. ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ, ಸೇವೆಯಾಟದ ಸೇವಾರ್ಥಿಗಳು, ಭಕ್ತಾದಿಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.