`ಮಂಗಳೂರು ದಸರಾ' ಮೆರವಣಿಗೆಗೆ ಸಿದ್ದವಾಗುತ್ತಿದೆ ಆದಿಯೋಗಿಯ ವಿಗ್ರಹ

`ಮಂಗಳೂರು ದಸರಾ' ಮೆರವಣಿಗೆಗೆ ಸಿದ್ದವಾಗುತ್ತಿದೆ ಆದಿಯೋಗಿಯ ವಿಗ್ರಹ


ಬಂಟ್ವಾಳ: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶ, ಸಾರಥ್ಯದಲ್ಲಿ ನಢಯುವ `ಮಂಗಳೂರು ದಸರಾ' ದೇಶಕ್ಕೆ ಫೇಮಸ್, ದಸರಾದ ಅಷ್ಟೂ ದಿನಗಳಲ್ಲಿ ಕುದ್ರೋಳಿ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗುವ ಶ್ರೀಶಾರದ ಮಾತೆಯನ್ನು ವೀಕ್ಷಿಸಲು ದೇಶ, ವಿದೇಶಗಳಿಂದಲು ಅಗಮಿಸುತ್ತಾರೆ.

ಕೊನೆಯ ದಿನದಂದು ಶ್ರೀಶಾರದಾ ಮಾತೆಯ ಮೆರವಣಿಗೆಯಲ್ಲಿ ನಾವು ಐವತ್ತಕ್ಕು ಅಧಿಕ ವಿವಿಧ ಬಗೆಯ ಸ್ತಬ್ಧಚಿತ್ರಗಳನ್ನು ನೋಡಿ ಅವುಗಳ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ಅವುಗಳ ಸಿದ್ದತೆಯಲ್ಲಿ ಕಲಾವಿದರ ಪರಿಶ್ರಮವಂತು ಅಪಾರವಾಗಿರುತ್ತದೆ.

ಈ ಬಾರಿಯ ಮಂಗಳೂರು ದಸರಾ ಮೆರವಣಿಗೆಗೆ ವಿನೂತನ ಸ್ತಬ್ಧಚಿತ್ರಕ್ಕೆ ಆದಿಯೋಗಿಯ ವಿಗ್ರಹವೊಂದು ಸಿದ್ದಗೊಳ್ಳುತ್ತಿದೆ. ಬಂಟ್ವಾಳಕ್ಕೆ ಸಮೀಪದ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಟುವಿನ ಕಲಾಕಾರ ಮನೋಜ್ ಕನಪಾಡಿ ಅವರ ಕುಕ್ಕೆಶ್ರೀ ಕುಟೀರದಲ್ಲಿ ಆದಿಯೋಗಿಯ ವಿಗ್ರಹ ಸಿದ್ದವಾಗುತ್ತಿದ್ದು, ಅಂತಿಮ ಸ್ಪರ್ಶದಲ್ಲಿದೆ.

ಕಳೆದ 20 ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿರುವ ಮನೋಜ್ ಅವರ ಕೈಚಳಕದಲ್ಲಿ ವಿವಿಧ ರಸ್ತೆಗಳ ಸರ್ಕಲ್ ಗಳಿಗೆ ಮೂರ್ತಿ, ರೆಸಾರ್ಟ್, ಗಾರ್ಡನ್, ಹೊಟೇಲ್ ಗಳಿಗೆ ಬೇರೆ ಬೇರೆ ಶೈಲಿಯ ವಿಗ್ರಹಗಳನ್ನು ತಯಾರಿಸುವ ಅವರು, ವಿನೂತನ ಶೈಲಿಯ ಕಲಾಕೃತಿಗಳ ತಯಾರಿಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಈಗಾಗಲೇ ಛತ್ರಪತಿ ಶಿವಾಜಿ, ಬೃಹದಾಕಾರದ ಈಶ್ವರ, ಕತ್ತೆತ್ತಿ ನೋಡುವ ಜಿರಾಫೆ, ಯಕ್ಷಗಾನ ಶೈಲಿಯ ಗೊಂಬೆ, ಕಂಬಳದ ಓಟದ ಕೋಣೆಗಳು, ಎತ್ತುಗಳ ಉಳುಮೆ ಮಾಡುವ ರೈತ, ಶ್ರೀಕೃಷ್ಣನ ಗೀತೋಪದೇಶ,ಪ್ರಾಣಿ,ಪಕ್ಷಿಗಳು ಸೇರಿದಂತೆ ನೂರಾರು ಶೈಲಿಯ ಸ್ತಬ್ಧ ಚಿತ್ರ ರಚಿಸಿ ಅವರು ಸೈ ಎನಿಸಿಕೊಂಡಿದ್ದಾರೆ.

ಆವೆ ಮಣ್ಣಿನಲ್ಲಿ ಮೂರ್ತಿ:

ಈ ಬಾರಿ ಮಂಗಳೂರು ದಸರಾ ಸೇರಿದಂತೆ ಹಲವು ಕಡೆಗಳ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಲಿರುವ ಆದಿಯೋಗಿ ಲೇಸರ್ ಶೋ ಪ್ರದರ್ಶನಕ್ಕೆ ಮೂರ್ತಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಮನೋಜ್ ಮತ್ತವರ ತಂಡ ತೊಡಗಿಕೊಂಡಿದೆ.

ಜಿಲ್ಲೆಯಲ್ಲಿ ಫೈಬರ್ ಆಟ್ 9 ಕಲಾವಿದರು ಅಪರೂಪವಾಗಿದ್ದು,ಎರಡರಿಂದ ಮೂರು ತಿಂಗಳ ಸತತ ಪರಿಶ್ರಮದ ಬಳಿಕ ಇಂತಹ ಮೂರ್ತಿಗಳು ಸಿದ್ದಗೊಳ್ಳಲಿದ್ದು, ಪ್ರಾರಂಭದಲ್ಲಿ ಆವೆ ಮಣ್ಣಿನಲ್ಲಿ ಮೂರ್ತಿಯನ್ನು ತಯಾರಿಸಿ ಬಳಿಕ ಅದರಿಂದ ಫೈಬರ್ ಮೋಲ್ಡ್ ಸಿದ್ಧಪಡಿಸುತ್ತಾರೆ. ಮುಂದೆ ಮೌಲ್ಡ್ ಮೂಲಕ ಎಷ್ಟು ಬೇಕಾದರೂ ಮೂರ್ತಿಗಳನ್ನು ಸಿದ್ಧಪಡಿಸಲು ಅನುಕೂಲವಾಗಲಿದೆ.

ಬಾಲ್ಯದಲ್ಲೆ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಮನೋಜ್ ಇದಕ್ಕೆ ಪೂರಕವಾಗಿ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಡಿಪ್ಲಮೋ ಪದವಿ ಪಡೆದರು. ಬಳಿಕ ಕಲಾಕೃತಿ ರಚನೆಯಲ್ಲಿ ವೃತ್ತಿ ಆರಂಭಿಸಿದ ಅವರು ಮಣ್ಣಿನ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಕ್ರಮೇಣ ಜನರಿಗೆ ಆಕರ್ಷಣೆಯಾಗುವ ಮತ್ತು ಹೆಚ್ಚು ಬಾಳಿಕೆ ಬರುವ ಫೈಬರ್ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಬ್ರಹ್ಮರಕೊಟ್ಲುವಿನ ಕನಪಾಡಿಯಲ್ಲಿ ಕುಕ್ಕೆಶ್ರೀ ಕಲಾಕೇಂದ್ರದಲ್ಲಿ ಜನರ ಬೇಡಿಕೆ ಅನುಗುಣವಾದ ಫೈಬರ್ ಮೂರ್ತಿ ಸಿದ್ದಪಡಿಸಿ ಮಾರಾಟ ಮಾಡುತ್ತಾರೆ. ಒಮ್ಮೆ ಇವರ ಕುಕ್ಕಶ್ರೀ ಕಲಾ ಕೇಂದ್ರಕ್ಕೆ ಭೇಟಿಯಾದರೆ ವಿವಿಧ ರೀತಿಯ ಹತ್ತು ಹಲವು ಕಲಾಕೃತಿಗಳನ್ನು ಕಾಣಬಹುದು.

ಇವರ ಕಲಾಕೃತಿ ರಚನೆಯ ಸಾಧನೆಗಾಗಿ ಹತ್ತು ಹಲವು ಪಶಸ್ತಿಗಳು ಲಭಿಸಿದ್ದಲ್ಲದೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಕಾರ್ಪೆಂಟರ್, ಗಾರೆ ಕೆಲಸ, ವೆಲ್ಡಿಂಗ್ ಕೆಲಸ ಗೊತ್ತಿದ್ದಾಗ ಮಾತ್ರ ಓರ್ವ ಉತ್ತಮ ಕಲಾವಿದನಾಗಲು ಸಾಧ್ಯವಿದ್ದು, ಆತ ಒಬ್ಬ ಉತ್ತಮ ಎಂಜಿನಿಯರ್ ಕೂಡ ಆಗಿರುತ್ತಾನೆ. ಕಳೆದ 20 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿದ್ದು, ಈ ಬಾರಿ ವಿಶೇಷವಾಗಿ ಮಂಗಳೂರು ದಸರಾ ಸೇರಿದಂತೆ ಇತರ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಲಿರುವ ಆದಿಯೋಗಿ ಮೂರ್ತಿ ನಮ್ಮಲ್ಲೇ ತಯಾರಾಗುತ್ತಿದೆ ಎಂದು ಕಲಾಕಾರ ಮನೋಜ್ ಕನಪಾಡಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article