ವೆನ್ಲಾಕ್ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ

ವೆನ್ಲಾಕ್ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ

ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸಾ ವಿಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ತುರ್ತು ಚಿಕಿತ್ಸಾ ವಿಭಾಗವನ್ನು ಹೊಸ ಸರ್ಜಿಕಲ್ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ.

ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ವೆನ್‌ಲಾಕ್ ಭೇಟಿ ನೀಡಿ ತುರ್ತು ಚಿಕಿತ್ಸಾ ವಿಭಾಗವನ್ನು ವೀಕ್ಷಿಸಿದರು. ಈ ಕಟ್ಟಡವನ್ನು ಕಳೆದ ಆಗಸ್ಟ್ 15ರಂದು ಉದ್ಘಾಟಿಸಲಾಗಿತ್ತು. ಸಾರ್ವಜನಿಕರು ಇನ್ನು ಮುಂದೆ ತುರ್ತು ಚಿಕಿತ್ಸಾ ವಿಭಾಗದ ಸೇವೆಗಾಗಿ ಹೊಸ ಸರ್ಜಿಕಲ್ ಬ್ಲಾಕ್‌ಗೆ ಭೇಟಿ ನೀಡುವಂತೆ ವೆನ್‌ಲಾಕ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article