ಪಂಚಾಯತ್‌ರಾಜ್ ಸಂಘಟನೆ ಸಮಿತಿ ಸಭೆ
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಸಭೆ ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಕಾಂಗ್ರೆಸ್ ಮುಂದಾಳು ಪ್ರಸಾದ್‌ರಾಜ ಕಾಂಚನ್ ಮಾತನಾಡಿ, ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಜನರನ್ನು ಮೋಸಗೊಳಿಸಿ ಗೆಲುವು ಸಾಧಿಸುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕರ‍್ಯಕರ್ತರು ಜನತೆಗೆ ಮನದಟ್ಟು ಮಾಡಬೇಕು. ಪಕ್ಷ ಸಂಘಟಿಸಿ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಉಡುಪಿಯಲ್ಲಿ ಹೆಚ್ಚಿನ ಮತ ಕ್ರೋಢೀಕರಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷ ಸಂಘಟನೆ ಮತ್ತು ಮುಂಬರುವ ವಿಧಾನ ಪರಿಷತ್ ಹಾಗೂ ಸ್ಥಳೀಯಾಡಳಿತ ಚುನಾವಣೆ ಬಗ್ಗೆ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಅಧ್ಯಕ್ಷ ಆನಂದ ಎನ್. ಪೂಜಾರಿ ಮಾತನಾಡಿದರು.
ಸುರೇಶ್ ಶೆಟ್ಟಿ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶರತ್ ಶೆಟ್ಟಿ, ರೋಶನ್ ಶೆಟ್ಟಿ, ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾ ನಾಯಕಿ ಐರಿನ್ ಅಂದ್ರಾದೆ, ಉದಯ ಪೂಜಾರಿ, ಅನಿಲ್ ಕುಮಾರ್ ಹೆರ್ಗ, ತಾರಾ ಬನ್ನಂಜೆ, ಕುಮುದಾ ಕಡಿಯಾಳಿ, ಸುದೇಶ್ ಶೇಟ್, ಫೆಲಿಕ್ಸ್ ಡಿ'ಸೋಜಾ, ಸದಾನಂದ ಕಿನ್ನಿಮೂಲ್ಕಿ, ಅನ್ವರ್ ಕುಕ್ಕಿಕಟ್ಟೆ, ಸಂಜಯ ಆಚಾರ್ಯ, ಭಾನುಪ್ರಕಾಶ್ ಪೂಜಾರಿ, ಸತೀಶ್ ಕೊಡವೂರು, ಲಕ್ಷಣ ಪೂಜಾರಿ ಮೊದಲಾದವರಿದ್ದರು. ಶೇಖರ್ ಶೆಟ್ಟಿ ಬನ್ನಂಜೆ ಸ್ವಾಗತಿಸಿ, ಸುರೇಶ್ ತೆಂಕನಿಡಿಯೂರು ವಂದಿಸಿದರು.
ನಾಳೆ ಜಿಲ್ಲಾ ಕಾಂಗ್ರೆಸ್ ಸಭೆ:
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ಸೆ. 30ರಂದು ಅಪರಾಹ್ನ 2.30ಕ್ಕೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ. ಕೆಪಿ.ಸಿ.ಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಉಸ್ತುವಾರಿ ಐವನ್ ಡಿ'ಸೋಜ ಮೊದಲಾದವರು ಭಾಗವಹಿಸುವರು.