
ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪಾಣೆಮಂಗಳೂರಿನ ಎಸ್.ಎಲ್.ಎನ್.ಪಿ. ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶೈಲಜಾ ಬಿ. ರೈ.
Sunday, October 20, 2024
ಬಂಟ್ವಾಳ: ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (RUPSA) ಕೊಡಮಾಡುವ ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾಣೆಮಂಗಳೂರಿನ ಎಸ್.ಎಲ್.ಎನ್.ಪಿ. ವಿದ್ಯಾಲಯದ ಶಿಕ್ಷಕಿ ಶೈಲಜಾ ಬಿ. ರೈ ಅವರು ಆಯ್ಕೆಯಾಗಿದ್ದರೆ.
ಇವರು 18 ವರ್ಷಗಳಿಂದ ಈ ಸಂಸ್ಥೆ ಯಲ್ಲಿ ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಉಲ್ಲವರಾಗಿದ್ದು, ಸುಮಾರು 14 ವರ್ಷಗಳ ಕಾಲ ಬುಲ್ ಬುಲ್ ಶಿಕ್ಷಕಿಯಾಗಿ ಅನೇಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆಯುವಂತೆ ಮಾಡಿದ್ದಾರೆ.
ಇವರು ಉತ್ತಮ ಕಾರ್ಯಕ್ರಮ ನಿರೂಪಕಿಯಾಗಿದ್ದು, ತನ್ನ ವಿದ್ಯಾರ್ಥಿಗಳಲ್ಲಿ ಭಾಷಣ, ಪರಿಸರ ಸಂರಕ್ಷಣೆ, ದೇಶಪ್ರೇಮ, ಧರ್ಮದ ಅರಿವಿನ ಬಗ್ಗೆ ಜಾಗ್ರತಿಯನ್ನು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ತಮ್ಮ ಶಾಲಾ ಮುಖ್ಯ ಶಿಕ್ಷಕಿಯವರ ಹಾಗೂ ಸಹಶಿಕ್ಷಕರ ಜೊತೆ ನಡೆಸುತ್ತಾ ಬಂದಿದ್ದಾರೆ.
ಇವರು ಸಾಲೇತ್ತೂರಿನ ಪಡೆಕುಂಜ ನಿವಾಸಿ, SRDCC ಬ್ಯಾಂಕ್ ನ ಪ್ರಬಂಧಕ ಬಾಲಕೃಷ್ಣ ರೈ ಇವರ ಧರ್ಮ ಪತ್ನಿ.