
ಕಾಂಗ್ರೆಸ್ ಕಾರ್ಯಕರ್ತ ಚಾವಡಿ ರಘುನಾಥ್ ರೈ ಮೇಲೆ ಚೂರಿ ಇರಿತ
Sunday, October 20, 2024
ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತ ಚಾವಡಿ ರಘುನಾಥ್ ರೈ ಮೇಲೆ ಇಬ್ಬರು ಯುವಕರು ಏಕಾಏಕಿ ಚೂರಿಯಿಂದ ತಲೆಗೆ ಇರಿದು ಹಲ್ಲೆ ಮಾಡಿ ಜೀವಬೆದರಿಕೆ ಒಡ್ಡಿರುವ ಘಟನೆ ತಿಂಗಲಾಡಿ ಬಳಿ ನಡೆದಿದೆ.
ರಘುನಾಥ್ ರೈ ಅವರು ಮದುವೆ ಕಾರ್ಯಕ್ರಮ ಮುಗಿಸಿ ಬಸ್ ಇಳಿದು ಅಂಗಡಿಯೊಂದಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿದ್ದ ಸುಧೀನ್ ರೈ ಹಾಗೂ ನಿಶಾಂತ್ ಪೂಜಾರಿ ಎಂಬವರು ಏಕಾಏಕಿ ದಾಳಿ ಮಾಡಿದ್ದಾರೆ.
ದಾಳಿ ಮಾಡಿದ ಪರಿಣಾಮ ತಲೆಯ ಭಾಗಕ್ಕೆ ಪೆಟ್ಟು ಬಿದ್ದಿದ್ದು, ತಕ್ಷಣ ರಘುನಾಥ್ ರೈ ಅವರನ್ನ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೂರಿ ಹಾಗೂ ಕೈಗೆ ಹಾಕುವಂತ ಖಡ್ಗದಿಂದ ರಘುನಾಥ್ ರೈ ಅವರ ತಲೆಗೆ ರಕ್ತ ಚಿಮ್ಮುವಂತೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿ ಆರೋಪಿ ನಿಶಾಂತ್ ಪೂಜಾರಿ ಹಾಗೂ ಸುಧೀನ್ ರೈ ಎಂಬವರನ್ನ ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ನಿಶಾಂತ್ ಪೂಜಾರಿ ಬಜರಂಗದಳದಲ್ಲಿ ಸಕ್ರೀಯನಾಗಿ ಗುರುತಿಸಿಕೊಂಡಿದ್ದಾನೆ. ಇಷ್ಟೇ ಅಲ್ಲದೇ ಈತನ ಮೇಲೆ ಹಲವಾರು ಪ್ರಕರಣಗಳೂ ಇವೆ. ಅಲ್ಲದೇ ಈತನಿಗೆ ಈ ಹಿಂದೆ ಗಡಿಪಾರು ಆದೇಶ ಆಗಿತ್ತು.
ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ದೂರು ದಾಖಲಿಸಿದ್ದಾರೆ