
ನಾಯಕತ್ವ ತರಬೇತಿ ಕಾರ್ಯಕ್ರಮ
Sunday, October 20, 2024
ಮಂಗಳೂರು: ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ವತಿಯಿಂದ ಅ. 19ರಂದು ನಾಯಕತ್ವ ತರಬೇತಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ವೈಆರ್‌ಸಿ ಕಾರ್ಯಕ್ರಮ ಅಧಿಕಾರಿ ಡಾ. ಅನುರಾಧ ಕುರುಂಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕರಿಗೆ ಇರಬೇಕಾದ ಗುಣ ಮತ್ತು ಕೌಶಲ್ಯ, ನಾಯಕರು ಹೇಗೆ ವರ್ತಿಸಬೇಕು, ನಮ್ಮ ಜೀವನದಲ್ಲಿ ನಾಯಕತ್ವ ಎಂಬುದು ಎಷ್ಟು ಮುಖ್ಯವಾಗಿದೆ, ಮತ್ತು ಸಮಯ ಸಂದರ್ಭ ಬಂದಾಗ ನಾವು ಎಲ್ಲರೂ ನಾಯಕರೇ ಎಂಬುದರ ಬಗ್ಗೆ ತರಬೇತಿಯನ್ನು ನೀಡಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಡಾ. ಜಯಕರ ಭಂಡಾರಿ ಎಂ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್, ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿ ಪ್ರಿಯ, ಯೂತ್ ರೆಡ್‌ಕ್ರಾಸ್ ಸಂಯೋಜಕರುಗಳಾದ ನಯನ ಕುಮಾರಿ ಕೆ, ಡಾ. ಅಶೋಕ್ ಸಿ.ಎಚ್., ಜ್ಯೋತಿ ಪಿ. ಉಪಸ್ಥಿತರಿದ್ದರು.