ದುರ್ಗಾಪರಮೇಶ್ವರಿ, ದೇವಿಪುರ ತಂಡಕ್ಕೆ ದಸರಾ ಕಬಡ್ಡಿ-2024 ಪ್ರಶಸ್ತಿ
Tuesday, October 1, 2024
ಮಂಗಳೂರು: ದಿ. ರವೀಂದ್ರ ಮರೋಳಿ ಸ್ಮರಣಾರ್ಥ ಉಳ್ಳಾಲ ತಾಲೂಕು ಮಟ್ಟದ `ದಸರಾ ಕಬಡ್ಡಿ-2024' ಪ್ರಶಸ್ತಿಯನ್ನು ದುರ್ಗಾಪರಮೇಶ್ವರಿ, ದೇವಿಪುರ ತಂಡ ಗೆದ್ದುಕೊಂಡಿದೆ. ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ, ಉಳ್ಳಾಲ ಹಾಗೂ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಆಶ್ರಯದಲ್ಲಿ ಹಾಗೂ ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೊಶಿಯೇಷನ್ ಸಹಭಾಗಿತ್ವದಲ್ಲಿ ರವಿವಾರ ಉಳ್ಳಾಲ ಪುರಸಭೆ ಮೈದಾನದಲ್ಲಿ ಜರಗಿದ ಈ ಸ್ಪರ್ಧೆಯಲ್ಲಿ 20 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದವು.
ವಿಜೇತ ತಂಡ ರೂ.10,000 ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು, ದ್ವಿತೀಯ ಸ್ಥಾನಿ ವಿದ್ಯಾಂಜನೇಯ ಉಳ್ಳಾಲಕ್ಕೆ ರೂ. 6000 ನಗದು ಮತ್ತು ಟ್ರೋಫಿ, ತೃತೀಯ ಸ್ಥಾನಿ ಸ್ಪೋರ್ಟಿಂಗ್ ಉಳ್ಳಾಲ ಹಾಗೂ ಚತುರ್ಥ ಸ್ಥಾನಿ ಭಾರತ್ ಫ್ರೆಂಡ್ಸ್, ಇರಾ ತಲಾ ರೂ. 3000 ನಗದಿನೊಂದಿಗೆ ಟ್ರೋಫಿ ಗೆದ್ದಿತು.
ಕಬಡ್ಡಿ ಪಂದ್ಯಾಟವನ್ನು ಲಕ್ಷ್ಮೀ ನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಎನ್. ಯೋಗೀಶ್ ಭಟ್, ಉಳ್ಳಾಲ ಭಗವತೀ ಕ್ಷೇತ್ರದ ಕಂಡಪ್ಪ ಕಾರ್ನವರ್, ಬಂಡಿಕೊಟ್ಯ ಮಲರಾಯ ದೈವಸ್ಥಾನದ ಲತೀಶ್ ಪೂಜಾರಿ ದೀಪ ಬೆಳಗಿ ಉದ್ಘಾಟಿಸಿದರು. ಬಿ.ಜೆ.ಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ನಿಶಾನ್ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಶಾರದಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀಕರ ಕಿಣಿ, ಅಧ್ಯಕ್ಷ ಭರತ್ ಕುಮಾರ್, ಉದ್ಯಮಿ ಹಾಗೂ ದಿ. ರವೀಂದ್ರ ಮರೋಳಿಯವರ ಸುಪುತ್ರ ಸುದೇಶ್ ಮರೋಳಿ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಅಮೀನ್, ರಾಜೇಶ್ ಪುತ್ರನ್, ವಿನೋದ್ ಮಲ್ಯ, ಜೀವನ್ ಉಳ್ಳಾಲ್, ಲತೀಶ್, ಜಯ ಉಳ್ಳಾಲ್, ವಿಜಯ ಕುಮಾರ್ ಬಸ್ತಿಪಡ್ಪು, ಯೋಗೀಶ್ ಟಿ.ಡಿ, ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಶ್ರೀಕಾಂತ್ ಅರಸುಹಿತ್ಲು, ನವೀನ್ ನಾಯಕ್,ರೇಣುಕಾ ಕಾಂಚನ್, ಉಳ್ಳಾಲ ತಾಲೂಕು ಅಮೆಚೂರ್ ಕಬಡ್ಡಿ ಅಸೊಸಿಯೇಷನ್‌ನ ಕಾರ್ಯದರ್ಶಿ ಸಿರಿಲ್ ಡಿ'ಸೋಜಾ, ಉಸ್ತಾದ್ ಲಿಂಗಪ್ಪ ಟೈಲರ್, ರಾಜ್ಯ ಮಟ್ಟದ ಮಾಜಿ ಕಬಡ್ಡಿ ಆಟಗಾರ ಹರೀಶ್ ಕುಮಾರ್ ಬಸ್ತಿಪಡ್ಪು, ರವೀಂದ್ರ ರಾಜ್ ಉಳ್ಳಾಲ್, ಚಂದ್ರಹಾಸ ಶ್ರೀಯಾನ್, ಕಾಂಚನ್ ಕೆ. ಇವರೇ ಮತ್ತಿತರರು ಉಪಸ್ಥಿತರಿದ್ದರು.
ಉತ್ತಮ ಕ್ಯಾಚರ್ ಆಗಿ ದೀಪಕ್ ದೇವಿಪುರ, ಬೆಸ್ಟ್ ರೈಡರ್ ಆಗಿ ಶ್ರವಣ್ ವಿದ್ಯಾಂಜನೇಯ, ಹಾಗೂ ಸರ್ವಾಂಗೀಣ ಆಟಗಾರನಾಗಿ ಸೋನು ದೇವಿಪುರ ವಿಶೇಷ ಬಹುಮಾನಕ್ಕೆ ಪಾತ್ರರಾದರು.