ಗೆಡ್ಡೆ ಗೆಣಸು ಸೊಪ್ಪು ಮೇಳಕ್ಕೆ ಜಿಲ್ಲೆಯ ರೈತರ ಸಿದ್ಧತೆ: ಜ.4-5 ರಂದು ದ.ಕ. ಜಿಲ್ಲೆಯಲ್ಲಿ ಪ್ರಥಮ ರಾಜ್ಯಮಟ್ಟದ ಮೇಳ: ವಿವಿಧ ಜಿಲ್ಲೆ, ರೈತರಿಂದ ವೈವಿಧ್ಯಮಯ ಗೆಡ್ಡೆ ಗೆಣಸುಗಳ ಪ್ರದರ್ಶನ

ಗೆಡ್ಡೆ ಗೆಣಸು ಸೊಪ್ಪು ಮೇಳಕ್ಕೆ ಜಿಲ್ಲೆಯ ರೈತರ ಸಿದ್ಧತೆ: ಜ.4-5 ರಂದು ದ.ಕ. ಜಿಲ್ಲೆಯಲ್ಲಿ ಪ್ರಥಮ ರಾಜ್ಯಮಟ್ಟದ ಮೇಳ: ವಿವಿಧ ಜಿಲ್ಲೆ, ರೈತರಿಂದ ವೈವಿಧ್ಯಮಯ ಗೆಡ್ಡೆ ಗೆಣಸುಗಳ ಪ್ರದರ್ಶನ

ಮಂಗಳೂರು: ಮನುಷ್ಯನ ಆರೋಗ್ಯದ ಸಮತೋಲನ ಕಾಪಾಡುವಲ್ಲಿ ನಮ್ಮ ಆಹಾರದಲ್ಲಿ ತರಕಾರಿ, ಹಣ್ಣುಹಂಪಲುಗಳ ಜತೆಗೆ ಗೆಡ್ಡೆ ಗೆಣಸು ಮತ್ತು ಸೊಪ್ಪುಗಳ ಪಾತ್ರವೂ ಪ್ರಮುಖ. ಈ ಗೆಡ್ಡೆ ಗೆಣಸುಗಳ ವೈವಿಧ್ಯತೆ, ಸೊಪ್ಪುಗಳ ನಾನಾ ವಿಧಗಳ ಬಗ್ಗೆ ಅರಿವು ಹಾಗೂ ಪರಿಚಯ ನೀಡುವ ಉದ್ದೇಶದಲ್ಲಿ ಮಂಗಳೂರಿನಲ್ಲಿ ಪ್ರಥಮ ಬಾರಿ ರಾಜ್ಯ ಮಟ್ಟದ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ರೈತರಿಂದ ಭರದ ಪೂರ್ವ ತಯಾರಿಗಳು ಆರಂಭಗೊಂಡಿವೆ. ಸಾವಯವ ಕೃಷಿಯ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುತ್ತಿರುವ ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ಜನವರಿ 4 ಮತ್ತು 5ರಂದು ಆಯೋಜಿಸಲಾಗಿರುವ ಈ ಮೇಳದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಗೆಣಸು, ಸುವರ್ಣ ಮೊದಲಾದ ಗೆಡ್ಡೆಗಳತ್ತ ಸಾವಯವ ಕೃಷಿಕರು ಒತ್ತು ನೀಡುತ್ತಿದ್ದಾರೆ.

ಈ ಮೇಳದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳುನಾಡಿನಿಂದಲೂ ವಿವಿಧ ರೀತಿಯ ಗೆಡ್ಡೆ ಗೆಣಸುಗಳೊಂದಿಗೆ ರೈತರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಾವಯವ ಬಳಗದಿಂದ ಮಾತುಕತೆ, ಆಹ್ವಾನ ನೀಡುವ ಚಟುವಟಿಕೆಗಳು ನಡೆಯುತ್ತಿವೆ. ವಿವಿಧ ಗೆಡ್ಡೆಗೆಣಸು, ಸೊಪ್ಪುಗಳ ವೈವಿಧ್ಯತೆಯ  ಪ್ರದರ್ಶನದ ಜತೆಗೆ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಗೆಡ್ಡೆ ಗೆಣಸು ಹಾಗೂ ಸೊಪ್ಪುಗಳ ವಿವಿಧ ಬಗೆಯ ಖಾದ್ಯಗಳ  ಪ್ರದರ್ಶನ ಹಾಗೂ ಮಾರಾಟವೂ ಮೇಳದಲ್ಲಿರಲಿದೆ.

ಮಂಗಳೂರಿನ ಸಂಘ ನಿಕೇತನದಲ್ಲಿ ಆಯೋಜಿಸಲಾಗಿರುವ ಮೇಳದ ಪೂರ್ವಭಾವಿಯಾಗಿ, ಮೇಳದ ಪೂರ್ವಭಾವಿಯಾಗಿ ಅ. 16ರಂದು ಶಕ್ತಿನಗರದ ಪ್ರಕೃತಿಫುಡ್ಸ್‌ನಲ್ಲಿ ಆಸಕ್ತರಿಗಾಗಿ ಹಾಲು  ಹಾಲು ಕೆಸುವಿನ ಬೆಳೆಸುವುದು ಹಾಗೂ ಮೌಲ್ಯವರ್ಧನೆಯ ಬಗ್ಗೆ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ. ಜೋನ್ಸನ್ ನೆಲ್ಯಾಡಿ ಮತ್ತು ತಂಡದಿಂದ ತರಬೇತಿ ನೀಡಲಾಗುತ್ತಿದ್ದು, 35 ಮಂದಿ ಹೆಸರು ನೋಂದಾಯಿಸಿದ್ದಾರೆ. 

ನ. 10ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಂತೂರು ಶ್ರೀ ಭಾರತೀ ಸಭಾಭವನದಲ್ಲಿ ಎಲೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಮೇಳಕ್ಕಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಎಂ.ಬಿ. ಪುರಾಣಿಕ್, ಅಧ್ಯಕ್ಷರಾಗಿ ನಿವೃತ್ತ ಎಡಿಸಿ ಪ್ರಭಾಕರ ಶರ್ಮರನ್ನು ಆಯ್ಕೆ ಮಾಡಲಾಗಿದೆ.

‘ಮೈಸೂರು ಮತ್ತು ಜೊಯಿಡಾದಲ್ಲಿ ಇಂತಹ ಗೆಡ್ಡೆಗೆಣಸು ಮೇಳಗಳು ನಡೆಯುತ್ತಿರುತ್ತವೆ. ಆದರೆ ದ.ಕ. ಜಿಲ್ಲೆಯಲ್ಲಿ ಇದು ಪ್ರಥಮ ಭಾರಿಗೆ ನಡೆಸಲಾಗುತ್ತಿದೆ. ಆಂಧ್ರ, ತಮಿಳುನಾಡು, ಕೇರಳ  ಮೊದಲಾದ ರಾಜ್ಯಗಳ ರೈತರ ಜತೆ ನಾವು ಈಗಾಗಲೇ ಮಾತುಕತೆ ನಡೆಸಿದ್ದು, ರಾಜ್ಯದ ಜೊಯಿಡಾ, ಉಡುಪಿ, ಮಡಿಕೇರಿ  ಸೇರಿದಂತೆ  ಹಲವು ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ಭಾಗವಹಿಸಲು  ಒಪ್ಪಿಕೊಂಡ ಹಲವು ರೈತರಿಗೆ ಈಗಾಗಲೇ ಅವರ ನಿವಾಸಕ್ಕೆ ತೆರಳಿ ಆಹ್ವಾನವ ನ್ನು ನೀಡಲಾಗಿದೆ’ ಎಂದು ಬಳಗದ ಪ್ರಮುಖರಾದ ರತ್ನಾಕರ್ ಕುಳಾಯಿ ತಿಳಿಸಿದ್ದಾರೆ.

‘ಕೇರಳ ವಯನಾಡಿನ ಶಾಜಿ ಎಂಬವರು 200ಕ್ಕೂ ಅಧಿಕ ಗೆಡ್ಡೆ ಗೆಣಸಿನ ವೈವಿಧ್ಯಗಳನ್ನು ಬೆಳೆಸುತ್ತಿದ್ದು, ಮೇಳದಲ್ಲಿ ಅವರು ಭಾಗವಹಿಸಲಿದ್ದಾರೆ. ವಿಶ್ವ ದಾಖಲೆ ಮಾಡಿದವರು, ಸಾಧನೆಗೈದ ರೈತರು ಈ ಮೇಳದಲ್ಲಿ ತಮ್ಮ ಬೆಳೆಗಳ ವೈವಿಧ್ಯತೆಯನ್ನು ಜಿಲ್ಲೆಯ ಜನರಿಗೆ ಪರಿಚಯಿಸಲಿದ್ದಾರೆ ರತ್ನಾಕರ ಕುಳಾಯಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article